Site icon PowerTV

ರೈಲು ಹಳಿ ಮೇಲೆ ಮರದ ದಿಮ್ಮಿ ಇಟ್ಟು ದುಷ್ಕೃತ್ಯ : ಸ್ವಲ್ಪದರಲ್ಲಿಯೆ ತಪ್ಪಿದ ದುರಂತ

ಉತ್ತರಪ್ರದೇಶ : ಇತ್ತೀಚಿನ ದಿನಗಳಲ್ಲಿ ರೈಲು ಹಳಿ ತಪ್ಪಿಸುವ ದುಷ್ಕೃತ್ಯ ಹಲವೆಡೆ ನಡೆದಿದ್ದು ಇದೀಗ ಉತ್ತರ ಪ್ರದೇಶದ ಮಲಿಹಾಬಾದ್​ನಲ್ಲಿಯು ರೈಲು ಹಳಿ ತಪ್ಪಿಸಲು ದುಷ್ಟರು ಯತ್ನಿಸಿದ್ದಾರೆ. ರೈಲು ನಿಲ್ದಾಣದ ಬಳಿ ರೈಲು ಹಳಿಯ ಮೇಲೆ 6 ಕೆ.ಜಿ.ಗೂ ಅಧಿಕ ಭಾರದ ಮರದ ದಿಮ್ಮಿಯನ್ನು ಇಟ್ಟು ರೈಲು ಹಳಿ ತಪ್ಪಿಸುವ ಯತ್ನಸಿಲಾಗಿದೆ.

ಗುರುವಾರ ತಡರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ. ರೈಲು ಸಂಖ್ಯೆ 14236 ಬರೇಲಿ-ವಾರಣಾಸಿ ಎಕ್ಸ್ಪ್ರೆಸ್ ರೈಲು ದೆಹಲಿ ಮತ್ತು ಲಕ್ನೋ ನಡುವೆ ಸಂಚರಿಸುತ್ತಿದ್ದ ಸಮಯದಲ್ಲಿ ಈ ಘಟನೆ ಸಂಭವಿಸಿದ್ದು ರೈಲು ಹಳಿಗಳ ಮೇಲಿದ್ದ ಮರದ ದಿಮ್ಮಿಗೆ ಡಿಕ್ಕಿ ಹೊಡೆದಿದೆ ಪರಿಣಾಮ ಎಚ್ಚೆತ್ತ ಪೈಲೆಟ್ ಕೂಡಲೇ ರೈಲನ್ನು ನಿಲ್ಲಿಸಿದ್ದಾರೆ, ಪರಿಣಾಮ ಹೆಚ್ಚಿನ ಅವಘಡ ತಪ್ಪಿದೆ, ಇದಾದ ಬಳಿಕ ಪೈಲೆಟ್ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ನಡೆಸಿದ ವೇಳೆ ಹಳಿಗಳ ಮೇಲೆ ಮರದ ದಿಮ್ಮಿಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದ್ದು ಇದೊಂದು ವಿಧ್ವಂ ಸಕ ಕೃತ್ಯ ಎಂದು ಹೇಳಿದ್ದಾರೆ. ಅಲ್ಲದೆ ಸುಮಾರು ಎರಡು ಗಂಟೆಗಳ ತಪಾಸಣೆ ಬಳಿಕ ರೈಲು ಸಂಚಾರ ಮುಂದುವರೆಯಿತು. ಒಂದು ತಿಂಗಳ ಹಿಂದೆಯಷ್ಟೇ ಉತ್ತರಾಖಂಡದ ರೂರ್ಕಿ ಬಳಿ ರೈಲ್ವೆ ಹಳಿಗಳ ಮೇಲೆ ಖಾಲಿ ಎಲ್ಪಿಜಿ ಸಿಲಿಂಡರ್ ಪತ್ತೆಯಾತ್ತು, ಇದಾದ ಬಳಿಕ ರೈಲು ಹಳಿಗಳ ಮೇಲೆ ಸಿಮೆಂಟ್ ಬ್ಲಾಕ್ ಇಟ್ಟು ಹಳಿ ತಪ್ಪಿಸುವ ಯತ್ನ ಕೂಡ ನಡೆದಿತ್ತು, ಆದರೆ ಲೋಕೋ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರಿ ಅವಘಡ ತಪ್ಪಿತ್ತು

Exit mobile version