Site icon PowerTV

ಪತ್ನಿಯನ್ನು ಚುಡಾಯಿಸಿದವನನ್ನು ಇರಿದು ಕೊ* ಮಾಡಿದ ಪತಿ

ಕೋಲಾರ : ಪತ್ನಿಯ ಮೇಲೆ ಕಣ್ಣುಹಾಕಿದ ಎಂಬ ಕಾರಣಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದ್ದು. ಕೊಲೆ ಆರೋಪಿ ಅಮ್ಜದ್​ನನ್ನು ಪೋಲಿಸರು ಬಂಧಿಸಿದ್ದಾರೆ.

ಕೋಲಾರ ನಗರದ ಜಮಾಲ್ ಷಾ ನಗರದಲ್ಲಿ ಘಟನೆ ನಡೆದಿದ್ದು. ಅರ್ಬಾಜ್ (25) ಎಂಬ ಯುವಕ ಕೊಲೆಯಾಗಿದ್ದಾನೆ. ಅಮ್ಜದ್ ಎಂಬ ವ್ಯಕ್ತಿ ಕೊಲೆ ಮಾಡಿದ್ದು ಆತನನ್ನು ಪೋಲಿಸರು ವಷಕ್ಕೆ ಪಡೆದುಕೊಂಡಿದ್ದಾರೆ.

ಪತ್ನಿಯ ಮೇಲೆ ಕಣ್ಣಾಕಿದ್ದ ಅನ್ನೋ ವಿಚಾರಕ್ಕೆ ಕೊಲೆಯಾಗಿದ್ದು. ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಎರಡ್ಮೂರು ಬಾರಿ ಗಲಾಟೆ ನಡೆದಿತ್ತು ಎಂಬ ಮಾಹಿತಿ ದೊರೆತಿದೆ. ಇದೇ ವಿಚಾರಕ್ಕೆ ನೆನ್ನೆ (ಅ.25) ರಾತ್ರಿ ಇಬ್ಬರ ನಡುವೆ ಮಾತಿಗೆ ಮಾತು ನಡೆದು ಗಲಾಟೆ ನಡೆದಿದೆ ಈ ಸಂಧರ್ಭದಲ್ಲಿ ಆರೋಪಿ ಅಮ್ಜದ್ ಚಾಕುವಿನಿಂದ ಎದೆಗೆ ಇರಿದು ಅರ್ಬಾಜ್ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಕೊಲೆ ಮಾಡಿದ ಆರೋಪಿ ಅಮ್ಜದ್ ನನ್ನು  ಪೊಲೀಸರು ಬಂಧಿಸಿದ್ದು.ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version