Site icon PowerTV

ಪ್ರೀತಿಯ ನಾಟಕವಾಡಿ ಗರ್ಭಿಣಿ ಪ್ರೇಯಸಿಯನ್ನೆ ಕೊಲೆ ಮಾಡಿ ಹೂತು ಹಾಕಿದ ದುರುಳ

ನವದೆಹಲಿ: ಮದುವೆಯಾಗು ಎಂದು ಬೆನ್ನು ಬಿದ್ದ ಗರ್ಭಿಣಿ ಪ್ರೇಯಸಿಯನ್ನೇ ಹತ್ಯೆಗೈದು ಹೂತು ಹಾಕಿದ ಪ್ರಿಯಕರನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ ಇದಕ್ಕೆ ಪೋಷಕರು ಒಪ್ಪಿರಲಿಲ್ಲ. ಪ್ರದೇಶದಲ್ಲಿ ಹೂತು ಹಾಕಿರುವ ಭಯಾನಕ ಘಟನೆಯೊಂದು ಹರಿಯಾಣದ ರೋಹಕರ್ ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಪಶ್ಚಿಮ ದೆಹಲಿಯ ನಾಂಗ್ಲೋಯ್ ನಿವಾಸಿಯಾಗಿರುವ ಸೋನಿ ಎನ್ನಲಾಗಿದೆ, ಸಂಜು ಅಲಿಯಾಸ್ ಸಲೀಂ ಸೋನಿಯನ್ನು ಹತ್ಯೆಗೈದ ಆರೋಪಿ.

ಸೋನಿ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್​ಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಿದ್ದಳು ಅಲ್ಲದೆ ಇನ್ನಾಗ್ರಾಮ್​ ನಲ್ಲಿ 6 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳಿದ್ದರು ಎನ್ನಲಾಗಿದೆ ಇದನ್ನು ಗಮನಿಸಿದ ಸಲೀಂ ಹೇಗಾದರೂ ಸೋನಿಯ ಸ್ನೇಹ ಬೆಳೆಸಿಕೊಳ್ಳಬೇಕು ಎಂದುಕೊಂಡಿದ್ದ ಅದರಂತೆ ಆಕೆಗೆ ನಿರಂತರ ಸಂದೇಶಗಳನ್ನು ಕಳುಹಿಸುತ್ತಿದ್ದ ಇದರಿಂದ ಪರಿಚಯವಾದ ಸಲೀಂ ತನ್ನ ಹೆಸರನ್ನು ಸೋನಿ ಬಳಿ ಸಂಜು ಎಂದು ಹೇಳಿಕೊಂಡಿದ್ದ,

ಹೀಗೆ ದಿನಕಳೆದಂತೆ ಪರಿಚಯ ಪ್ರೀತಿಗೆ ತಿರುಗಿ ಇದೀಗ ಆಕೆ ಏಳು ತಿಂಗಳ ಗರ್ಭಿಣಿ ಈ ವಿಚಾರ ಮನೆಯಲ್ಲಿ ಗೊತ್ತಾದರೆ ಎಂದು ಹೆದರಿದ ಸೋನಿ ಸಂಜು ಬಳಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಆತ ಮೊದಲು ಮಗುವನ್ನು ತೆಗಿಸು ಆಮೇಲೆ ಮದುವೆ ನೋಡೋಣ ಎಂದು ಹೇಳಿದ್ದನಂತೆ ಇದರಿಂದ ಗಾಬರಿಗೊಂಡ ಸೋನಿ ಮನೆಯವರಲ್ಲಿ ಸಂಜು ನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ ಇದಕ್ಕೆ ಹೀಕೆಯ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ಆದ್ದರಿಂದ ಯುವತಿ ಪ್ರೇಮಿಗೆ ಮದುವೆಯಾಗು ಎಂದು ಒತ್ತಾಯಿಸಿದ್ದಳು. ಆದರೆ ಇದಕ್ಕೆ ಒಪ್ಪದ ಪ್ರೇಮಿ ಸಲೀಂ ಆಕೆಯನ್ನು ಕೊಲೆ ಮಾಡಿ ನಿರ್ಜನ ಪ್ರದೇಶದಲ್ಲಿ ಊತು ಹಾಕಿದ್ದಾನೆ ಎಂದು ಮಾಹಿತಿ ದೊರೆತಿದೆ.

Exit mobile version