Site icon PowerTV

ಮಹಾ ವಿಧಾನಸಭೆ ಚುನಾವಣೆ 23 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್

ಮಹರಾಷ್ಟ್ರ : ರಾಜ್ಯದ ವಿಧಾನ ಸಭಾ ಚುನಾವಣೆ ನವೆಂಬರ್​ 19ರಂದು ನಡೆಯಲಿದ್ದು. ಇದಾಗಲೆ ಮಹರಾಷ್ಟ್ರದಲ್ಲಿ ಚುನಾವಣಾ ಕಾವು ಹೆಚ್ಚಾಗಿದೆ. ಎರಡು ಮೈತ್ರಿ ಕೂಟಗಳು ಚುನಾವಣೆಯಲ್ಲಿ ಗೆಲುವು ಪಡೆಯಲು ಭಾರೀ ಕಸರತ್ತು ನಡೆಸುತ್ತಿವೆ.

ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿರುವ 23 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಶನಿವಾರ ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷವು 48 ಅಭ್ಯರ್ಥಿಗಳನ್ನೊಳಗೊಂಡ ತನ್ನ ಮೊದಲ ಪಟ್ಟಿಯನ್ನು ಗುರುವಾರ ಪ್ರಕಟಿಸಿತ್ತು. ಇದರೊಂದಿಗೆ ಒಟ್ಟು 71 ಅಭ್ಯರ್ಥಿಗಳನ್ನು ಪಕ್ಷ ಅಧಿಕೃತಗೊಳಿಸಿದಂತಾಗಿದೆ.

288 ಸದಸ್ಯ ಬಲದ ‘ಮಹಾ’ ವಿಧಾನಸಭೆಗೆ ನವೆಂಬರ್ 20ರಂದು ಒಂದೇ ಹಂತದಲ್ಲಿ ಚುನಾವಣೆ ನಿಗದಿಯಾಗಿದೆ. 23ರಂದು ಫಲಿತಾಂಶ ಬರಲಿದೆ. ಸದ್ಯ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ, ಬಿಜೆಪಿ ಹಾಗೂ ಅಜಿತ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವನ್ನು ಒಳಗೊಂಡ ‘ಮಹಾಯುತಿ’ ಸರ್ಕಾರ ಅಸ್ತಿತ್ವದಲ್ಲಿದೆ.

Exit mobile version