Site icon PowerTV

ಅಕ್ಕನ ಗಂಡನಿಗಾಗಿ ತನ್ನ ಗಂಡನಿಗೆ ಚಟ್ಟ ಕಟ್ಟಿದ ಐನಾತಿ ಹೆಂಡತಿ

ಬಳ್ಳಾರಿ :  ತಾಳಿ ಕಟ್ಟಿದ ಗಂಡನಿಗೆ ಹೆಂಡತಿಯೊಬ್ಬಳು  ಚಟ್ಟ ಕಟ್ಟಿರುವ ಘಟನೆ ಬಳ್ಳಾರಿ ಜಿಲ್ಲೆ ,ಸಿರಗುಪ್ಪ ತಾಲೂಕಿನ, ಕರೂರು ಗ್ರಾಮದಲ್ಲಿ ನಡೆದಿದೆ. ತನ್ನ ಗಂಡನೊಂದಿಗೆ ಇರಲು ಇಷ್ಟವಿಲ್ಲದ ಮಹಿಳೆ ಪ್ರಿಯಕರನ ಜೊತೆ ಸೇರಿ ತನ್ನ ಗಂಡನನ್ನೆ ಯಮಪುರಿಗೆ ಕಳುಹಿಸಿದ್ದಾಳೆ.

ಆರೋಪಿ ನಾಗರತ್ನ ಮತ್ತು ಕೊಲೆಯಾದ ತಿಪ್ಪೇಶ ಇಬ್ಬರು ಮದುವೆಯಾಗಿ ಸುಖ ಜೀವನ ನಡೆಸುತ್ತಿದ್ದರು. ಇವರು ಭೋಗನಹಳ್ಳಿ ಬಳಿಯ ಲೇಬರ್​ ಶೆಡ್​ನಲ್ಲಿ ಉಳಿದುಕೊಂಡು, ಗಾರ್ಡನರ್​ಗಳಾಗಿ ಕೆಲಸ ಮಾಡಿಕೊಂಡಿದ್ದರು, ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದರು. ಆದರೆ ಕಳೆದ ಅಕ್ಟೋಬರ್ 14 ರಂದು ಭೋಗನಹಳ್ಳಿ ಕೆರೆಯ ಬಳಿಯಲ್ಲಿನ ನೀಲಗಿರಿ ತೋಪಿನಲ್ಲಿ ಪತಿ ತಿಪ್ಪೇಶನ ಶವ ಪತ್ತೆಯಾಗಿತ್ತು. ಇದಕ್ಕು ಮುನ್ನ ಕೆಲ ದಿನಗಳ ಹಿಂದೆ ಕೊಲೆ ಆರೋಪಿಯಾದ ನಾಗರತ್ನ ಬೆಳಂದೂರು ಪೋಲಿಸ್ ಠಾಣೆಗೆ ಬಂದು ತನ್ನ ಪತಿ ಕಾಣೆಯಾಗಿದ್ದಾನೆ ಎಂದು ದೂರು ಕೊಟ್ಟಿದಳು.

ಪತಿ ಶವ  ಪತ್ತೆಯಾದ ದಿನ ಪತಿಯ ಶವದ ಮುಂದೆ ಕುಳಿತು ಕಣ್ಣೀರಿನ ನಾಟಕವಾಡಿದ್ದ ನಾಗರತ್ನನ ಬಗ್ಗೆ ಪೋಲಿಸರು ಅನುಮಾನ ಪಟ್ಟು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಪತಿಯನ್ನು ತಾನೆ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಅಕ್ಕನ ಗಂಡನ ಜೊತೆ ಪ್ರಿತಿಯಲ್ಲಿ ಬಿದ್ದಿದ್ದ ನಾಗರತ್ನ ತಮ್ಮ ಪ್ರೀತಿಗೆ ಪತಿ ತಿಪ್ಪೇಶ ಅಡ್ಡಿಯಾಗುತ್ತಾನೆ ಎಂದು ಯೋಚಿಸಿ ಕೊಲೆ ಮಾಡಿದ್ದಾಳೆ. ಈ ಕೊಲೆ ಪ್ರಕರಣದಲ್ಲಿ ಬೆಳಂದೂರು ಪೋಲಿಸರು ಐವರನ್ನು ಬಂದಿಸಿದ್ದು. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

 

Exit mobile version