Site icon PowerTV

ಕುಡಿದ ಅಮಲಿನಲ್ಲಿ ಮಹಿಳೆಯರ ಮೇಲೆ ಚಪ್ಪಲಿಯಿಂದ ಹಲ್ಲೆ

ಬೆಂಗಳೂರು : ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸುಬ್ರಹ್ಮಣ್ಯ ಪುರದಲ್ಲಿ ನಡೆದಿದೆ. ವ್ಯಕ್ತಿ ಹಲ್ಲೆ ಮಾಡಿದ್ದ ವಿಡಿಯೋವನ್ನು ಹರೀಶ್.ಕೆ.ಬಿ ಎಂಬ ವ್ಯಕ್ತಿ  ಎಕ್ಷ್​ನಲ್ಲಿ ಬೆಂಗಳೂರು ಪೋಲಿಸರಿಗೆ ಟ್ಯಾಗ್ ಮಾಡಿದ್ದರು. ಇದರಿಂದ ಎಚ್ಚೆತ್ತ ಪೋಲಿಸರು ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಮಹಿಳೆಯರ ಮೇಲೆ ನಡುರಸ್ತೆಯಲ್ಲೇ ವ್ಯಕ್ತಯೊಬ್ಬ ಅಟ್ಟಹಾಸ ಮೆರೆದಿದ್ದು. ಮಹಿಳೆಯರನ್ನು ಎಳೆದಾಡಿ ಬಟ್ಟೆ ಹರಿದಿದ್ದಾನೆ. ಕುಡಿದು ಅಮಲಿನಲ್ಲಿ ರಂಪಾಟ ಮಾಡಿರುವ ಆಸಾಮಿ ಪ್ರತಿದಿನ ಮಹಿಳೆಯರಿಗೆ ಮಾನಸಿಕವಾಗಿ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಮಹಿಳೆಯರಿಗೆ ಹಲ್ಲೆ ಮಾಡಿದ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದ್ದು. ಪೋಲಿಸರು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

 

Exit mobile version