Site icon PowerTV

ಯುವತಿ ಮೇಲೆ ಹಲ್ಲೆ: ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ

ಬೆಂಗಳೂರು : ಬೈಕ್​ಗೆ ಅಡ್ಡ ಬರ್ತಿದ್ದ ನಾಯಿಗಳಿಗೆ ಕಲ್ಲು ಹೊಡೆದಿದ್ದಕ್ಕೆ ಯುವತಿ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ  ರಾಮಮೂರ್ತಿನಗರದಲ್ಲಿ ನಡೆದಿದೆ. ಯುವಕನ ವರ್ತನೆಯಿಂದ ಬೇಸತ್ತ ಯುವತಿ ಪೋಲಿಸರಿಗೆ ದೂರು ನೀಡಿದ್ದರು ಪೋಲಿಸರು ಆರೋಪಿಯ ಹೆಸರನ್ನು ಉಲ್ಲೇಖಿಸಿದೆ ಇರುವುದು ಯುವತಿಯ ಆಕ್ರೋಶಕ್ಕೆ ಕಾರಣವಾಗಿದೆ.

ಎನ್.ಆರ್.ಐ ಲೇಔಟ್ ನ ರಿಚಿಸ್ ಗಾರ್ಡ್ ನ 1ನೇ ಕ್ರಾಸ್ ನಲ್ಲಿ ಘಟನೆ ನಡೆದಿದ್ದು. ಅಕ್ಟೋಬರ್ 23ರ ಮಧ್ಯಾಹ್ನ 2.30ರ ಸುಮಾರಿಗೆ ಸ್ಕೂಟಿಯಲ್ಲಿ ಹೋಗ್ತಿದ್ದ ಯುವತಿಯ ಗಾಡಿಗೆ ನಾಯಿಗಳು ಏಕಾಏಕಿ ಅಡ್ಡ ಬಂದಿದ್ದವೆಂದು ಯುವತಿ ನಾಯಿಗಳಿಗೆ ಕಲ್ಲಿನಿಂದ ಹೊಡೆದಿದ್ದಳು. ಇದಕ್ಕೆ ಅಲ್ಲಿಯೆ ಇದ್ದ ಯುವಕನೊಬ್ಬ ವಿರೋಧಿಸಿ ಯುವತಿಯೊಂದಿಗೆ ಗಲಾಟೆ ತೆಗೆದು ಅಸಭ್ಯವಾಗಿ ವರ್ತಿಸಿದ್ದನು.

ಯುವತಿಯ ಬೈಕ್​​ ಕೀ ಕಿತ್ತುಕೊಂಡು, ಅವಾಶ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಿದ್ದು. ಯುವತಿ ಖಾಸಗಿ ಅಂಗಗಳನ್ಉ ಮುಟ್ಟಿ ಅಸಭ್ಯವಾಗಿ ವರ್ತಿಸಿ. ಮುಖಕ್ಕೆ ಹೊಡೆದಿದ್ದಾನೆ ಎಂದು ಆರೋಪಿಸಿದ್ದಾರೆ. ಯುವತಿ ಜೊತೆ ಯುವಕ ಗಲಾಟೆ ಮಾಡ್ತಿದ್ದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದ್ದು. ಪೋಲಿಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

 

Exit mobile version