Site icon PowerTV

ಹುಚ್ಚು ನಾಯಿಯ ಅಟ್ಟಹಾಸಕ್ಕೆ 10ಕ್ಕೂ ಹೆಚ್ಚುಮಂದಿ ಆಸ್ಪತ್ರೆಗೆ ದಾಖಲು

ಕೋಲಾರ : ನಗರದಲ್ಲಿ ಹುಚ್ಚು ನಾಯಿಯ ಅಟ್ಟಹಾಸ ಮಿತಿಮೀರಿದ್ದು. ನಾಯಿ ದಾಳಿಯಿಂದಾಗಿ ಸುಮಾರು 10 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಂದೇ ಹುಚ್ಚು ನಾಯಿ ಹಲವು ಗ್ರಾಮದಲ್ಲಿ ದಾಳಿ ಮಾಡಿ ಹಲವಾರು ಜನರನ್ನು ಗಾಯಗೊಳಿಸಿದೆ ಎಂಬ ಮಾಹಿತಿ ದೊರೆತಿದೆ.

ಕೋಲಾರದ,ಶ್ರೀನಿವಾಸಪುರ ತಾಲೂಕಿನ, ರೋಣೂರಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಾಯಿ ದಾಳಿಯಾಗಿದ್ದು. ಚಿಕ್ಕತಿಮ್ಮನಹಳ್ಳಿ, ರೆಡ್ಡಂಪಲ್ಲಿ, ಕೋಟಪಲ್ಲಿ, ರೋಜರಪಲ್ಲಿಯ ಸುತ್ತಮುತ್ತದ ಗ್ರಾಮಗಳಲ್ಲಿ ದಾಳಿಯಾಗಿದೆ. ಸುಮಾರು 10ಕ್ಕೂ ಹೆಚ್ಚು ಜನರನ್ನುನಾಯಿ ಕಚ್ಚಿ ಗಾಯಗೊಳಿಸಿದೆ. ಮಹಿಳೆಯರು, ವೃದ್ದರ ಮೇಲೆ ಹುಚ್ಚು ನಾಯಿ ದಾಳಿಯಾಗಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ತಿಪ್ಪಮ್ಮ (80), ಗೀತಮ್ಮ (50), ಮತ್ತು ಮುನಿಯಪ್ಪ ಎಂಬುವವರಿಗೆ  ಗಂಭೀರ ಗಾಯವಾಗಿದ್ದು. ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನಿಡಲಾಗುತ್ತಿದೆ. ಉಳಿದ 6 ಜನ ಗಾಯಾಳುಗಳಿಗೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

Exit mobile version