Site icon PowerTV

ಸ್ವಾರ್ಥಕ್ಕಾಗಿ ಪಕ್ಷ ಬದಲಿಸುವ ವ್ಯಕ್ತಿ ಸಿಪಿ ಯೋಗೆಶ್ವರ್: ಎಂದು ಕುಟುಕಿದ ಸದಾನಂದ ಗೌಡ

ರಾಮನಗರ : ಚನ್ನಪಟ್ಟಣ ಉಪಚುನಾವಣೆ ದಿನಾಂಕ ಘೋಷಣೆಯಾಗಿದ್ದೆ ತಡ ಚುನಾವಣ ಕಣ ರಂಗೇರಿದ್ದು ಇಂದು ನಿಖಿಲ್​ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಸಲು ಬಿಜೆಪಿ ಪಕ್ಷದ ನಾಯಕರು ನಿಖಿಲ್​ಗೆ ಸಾಥ್ ನೀಡಿದರು.ಈ ವೇಳೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸದಾನಂದ ಗೌಡ ಸಿ.ಪಿ ಯೋಗೇಶ್ವರ್​​ ಮೇಲೆ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸದಾನಂದ ಗೌಡ ಚನ್ನಪಟ್ಟಣದಲ್ಲಿ ಒಂದು ವ್ಯಕ್ತಿ ಒಂದು ಪಕ್ಷ ಅಂತ ಬಿಂಬಿಸಿಕೊಂಡಿದ್ದಾರೆ. ಸಿಪಿವೈ 6 ನೇ ಸಲ ಪಕ್ಷಾಂತರ ಮಾಡಿದ ವ್ಯಕ್ತಿ. ಸ್ವಾರ್ಥಕ್ಕಾಗಿ ಪಕ್ಷ ಬದಲಿಸುವ ವ್ಯಕ್ತಿ ಸಿಪಿ ಯೋಗೆಶ್ವರ್ ಎಂದು ವಾಗ್ದಾಳಿ ನಡೆಸಿದರು.

ಮುಂದುವರಿದು ಮಾತನಾಡಿದ ಸದಾನಂದ ಗೌಡರು ಇದು ಪಕ್ಷ ಆಧಾರಿತವಾದ ಚುನಾವಣೆಯಾಗಿದೆ. ಒಬ್ಬ ವ್ಯಕ್ತಿಯನ್ನು ಎಲ್ಲಿ ಇಡಬೇಕು ಅನ್ನೋದು ಎಲ್ಲಾ ಪಕ್ಷದವರು ಈ ಚುನಾವಣೆಯನ್ನು ನೋಡಿ ಕಲಿಯ ಬೇಕಾಗುತ್ತದೆ ಎಂದು ಹೇಳಿದರು.

ನಾನು ಸಿಎಂ ಆಗಿ ಕೆಲಸ ಮಾಡಿದ್ದೀನಿ, ಸಿ.ಪಿ.ಯೋಗೇಶ್ವರ್​ರನ್ನು ಮಂತ್ರಿ ಮಾಡಿದ್ದೀನಿ. ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷ ವೀಕ್ ಆಗಿದ್ದಾಗ.ಸಿ.ಪಿ ಯೋಗೆಶ್ವರ್ ಅವರಿಗೆ ಸಂಪೂರ್ಣ ಬೆಂಬಲ‌ ನೀಡಿದ್ದೆವು.
ನಾನು ಸಿಎಂ ಆಗಿದ್ದಾಗ 6 ಕೆರೆಗಳನ್ನು ಚನ್ನಪಟ್ಟಣದಲ್ಲಿ ತುಂಬಿಸಿದ್ದೇನೆ. ಜನ ಕುಡಿಯಲು, ವ್ಯವಸಾಯ ಮಾಡಲು‌ ನೀರಿಲ್ಲ ಎಂದಾಗ ಅವರ ನೆರವಿಗೆ ಬಿಜೆಪಿ ಪಕ್ಷ ಧಾವಿಸಿತ್ತು. 150 ಕೋಟಿ ಹಣವನ್ನು ಕೆರೆಗೆ ನೀರು ತುಂಬಿಸಲು ಕೊಟ್ಟಿದ್ದೇವೆ ಆದರೆ ಯೋಗೆಶ್ವರ್ ಕಾಂಗ್ರೆಸ್ ನಲ್ಲಿ ಇದ್ದಾಗ ಎಷ್ಟು ಹಣ ತಂದು ಅಭಿವೃದ್ಧಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Exit mobile version