Site icon PowerTV

ಚಪ್ಪಲಿ ಹಾಕಿ ಅವಮಾನ : 9 ವರ್ಷದ ನಂತರ ಹತ್ಯೆ ಮಾಡಿ ಪ್ರತಿಕಾರವೆಂದ ಆರೋಪಿ

ಉತ್ತರಪ್ರದೇಶ :ಚಪ್ಪಲಿ ಹಾಕಿ ಅವಮಾನ ಮಾಡಿದ ಪಂಚಾಯಿತಿ ಮುಖ್ಯಸ್ಥನನ್ನು 9ವರ್ಷದ ನಂತರ ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ  ಪಕ್ವಾರ ಗ್ರಾಮದಲ್ಲಿ ನಡೆದಿದೆ.

ಒಂಬತ್ತು ವರ್ಷಗಳ ಹಿಂದೆ ಪಾದರಕ್ಷೆ ಹಾರ ಹಾಕಿ ಅವಮಾನಿಸಿದ್ದಕ್ಕೆ ಪ್ರತೀಕಾರವಾಗಿ ಪಂಚಾಯ್ತಿ ಮುಖಂಡನನ್ನು ಹತ್ಯೆಗೈದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ ಉತ್ತರ ಪ್ರದೇಶ ದ ಪಕ್ವಾರಾ ಗ್ರಾಮದರಲ್ಲಿ ತನ್ನ ಸೊಸೆಯನ್ನು ಅವಮಾನ ಮಾಡಿದ್ದ ಮುನ್ನೀರ್ ಎಂಬಾತನನ್ನು ಘನಶ್ಯಾಮ್ ಸೈನಿ ಎಂಬಾತ ಪಂಚಾಯ್ತಿಗೆ ಎಳೆದಿದ್ದ. ಪಂಚಾಯ್ತಿಯಲ್ಲಿ ಮುನ್ನೀರ್ ಗೆ ಪಾದರಕ್ಷೆಯಿಂದ ಥಳಿಸಿ, ಬಳಿಕ ಅವನಿಗೆ ಚಪ್ಪಲಿ ಹಾರ ಹಾಕಿ ಊರ ತುಂಬಾ ಮೆರವಣಿಗೆ ಮಾಡಿ ಶಿಕ್ಷಿಸಲಾಗಿತ್ತು.

ಈ ಘಟನೆ ನಂತರ ತನಗೆ ಅವಮಾನದಿಂದ ಊರಿನಲ್ಲಿ ಬದುಕೋದಕ್ಕೆ ಆಗಲಿಲ್ಲ. ಪ್ರತಿಯೊಬ್ಬರು ತಮಾಷೆ ಮಾಡುತ್ತಿದ್ದರು. ಅವಮಾನದಿಂದ ನೊಂದು ಪಕ್ವಾರಾ ಗ್ರಾಮದಿಂದ ರಾಜಸ್ಥಾನಕ್ಕೆ ತೆರಳಿ, ಅಲ್ಲಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಆದರೂ ಅಪರೂಪಕ್ಕೊಮ್ಮೆ ಊರಿಗೆ ಬಂದಾಗಲೂ ಜನ ಅವಮಾನ ಮಾಡುತ್ತಿದ್ದರು. ಇದರಿಂದಾಗಿ ಆ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲ ಘನಶ್ಯಾಮ್​ ನನ್ನು ಹತ್ಯೆ ಮಾಡಿದ್ದಾಗಿ ಮುನ್ನೀರ್ ಪೊಲೀಸರಿಗೆ ತಿಳಿಸಿದ್ದಾನೆ.

Exit mobile version