Site icon PowerTV

ಆಸ್ತಿ 78 ಕೋಟಿ, ಆದಾಯ ತೆರಿಗೆ ಬಾಕಿ 80 ಕೋಟಿ : ಆಸ್ತಿಗಿಂತ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಂಡ ಪ್ರಿಯಾಂಕ ಗಾಂಧಿ

ಕೇರಳ : ಇದೇ ಮೊದಲ ಭಾರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಪ್ರಿಯಾಂಕ ಗಾಂಧಿ ನೆನ್ನೆ ಬೃಹತ್ ರೋಡ್​ಶೋ ನಡೆಸಿ ನಾಮಪತ್ರ ಸಲ್ಲಿಸಿದ್ದರು. ವಯನಾಡ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಅಫಿಡವಿಟ್ ನಲ್ಲಿ ಪ್ರಿಯಾಂಕ ಗಾಂಧಿ ತಮ್ಮ  ಆಸ್ತಿ ವಿವರ ಘೋಷಣೆ ಮಾಡಿದ್ದು. ತಮ್ಮ ಆಸ್ತಿಗಿಂತ ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆಯೆ ಹೆಚ್ಚಿದೆ ಎಂಬುದು ಅಚ್ಚರಿಯ ವಿಷಯವಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿರಿಂದ ತಮ್ಮ ನಾಮಪತ್ರದಲ್ಲಿ ತಮ್ಮ ಆಸ್ತಿಪಾಸ್ತಿ ಮತ್ತು ತೆರಿಗೆಬಾಕಿ ಬಗ್ಗೆ ಅಫಿಡವಿಟ್ ಸಲ್ಲಿಕೆ ಮಾಡಿದ್ದು. ಮೊದಲ ಬಾರಿಗೆ ತಮ್ಮ ಆಸ್ತಿ ವಿವರಗಳನ್ನು ಘೋಷಿಸಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿರಿಂದ 12 ಕೋಟಿ ರೂಪಾಯಿ ಆಸ್ತಿ ಘೋಷಣೆ ಮಾಡಿಕೊಂಡಿದ್ದು ತಮ್ಮ ಪತಿ ರಾರ್ಬಟ್ ವಾದ್ರಾ ಹೆಸರಿನಲ್ಲಿ 66 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.

ಆದರೆ ಇದೆಲ್ಲಕಿಂತ ಹೆಚ್ಚು ಆಸಕ್ತಿದಾಯಕ ವಿಷಯವೆಂದರೆ ಪ್ರಿಯಾಂಕ ಅವರ ನಾಮಪತ್ರದಲ್ಲಿ ತೆರಿಗೆ ಬಾಕಿಯ ವಿವರವನ್ನು ಕೂಡ ಉಲ್ಲೇಖ ಮಾಡಿದ್ದು ಬರೋಬ್ಬರಿ 80 ಕೋಟಿ ರೂಪಾಯಿಗಳ ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದೇವೆ ಎಂದು ಉಲ್ಲೇಖಿಸಲಾಗಿದೆ. ಪ್ರಿಯಾಂಕ ಗಾಂಧಿ ದಂಪತಿಗಳ ಒಟ್ಟು ಆಸ್ತಿ 78 ಕೋಟಿ ಇದ್ದು ಅದಕ್ಕಿಂತ ಹೆಚ್ಚು ತೆರಿಗೆ ಬಾಕಿ ಉಳಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ಐಟಿ ಟ್ರಿಬ್ಯುನಲ್ ಮತ್ತು ಕೋರ್ಟ್ ಪ್ರಕರಣ ನಡೆಯುತ್ತಿದೆ ಎಂದು ಸಹ ಉಲ್ಲೇಖಿಸಲಾಗಿದೆ.

 

Exit mobile version