Site icon PowerTV

ಪಟಾಕಿ ಮಾರಟಕ್ಕೆ ಕಠಿಣ ರೂಪುರೇಷೆ ವಿಧಿಸಿದ ಜಿಲ್ಲಾಡಳಿತ

ಬೆಂಗಳೂರು : ಕಳೆದ ವರ್ಷ ಪಟಾಕಿ ದುರಂತ ಹಿನ್ನೆಲೆ ಈ ಭಾರೀ ಯಾವುದೇ ಅವಘಡವಾಗದಂತೆ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ರೂಪಿಸಿದೆ. ಮಾರಾಟಗಾರರಿಗೆ ಹಲವಾರು ನಿಯಮಗಳನ್ನು ವಿಧಿಸಿದ್ದು ಅದನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ದೊರೆತಿದೆ.

ಸದ್ಯ ಈ ವರ್ಷ ಪಟಾಕಿಯಿಂದ ಯಾವುದೇ ಅವಘಡವಾಗದಂತೆ ಎಚ್ಚೆತ್ತಿರುವ ಜಿಲ್ಲಾಡಳಿತ. ಬೆಂಗಳೂರಿನ ವಸತಿ, ವಾಣಿಜ್ಯ ಸಂಕೀರ್ಣ ಸ್ಥಳದಲ್ಲಿ ಪಟಾಕಿ ಸಂಗ್ರಹವನ್ನು ನಿಷೇದಿಸಿದೆ. ಪಟಾಕಿ ದಾಸ್ತಾನು ಮಾಡಲು ಕಡ್ಡಾಯವಾಗಿ ಅನುಮತಿ ಪಡೆದಿರಬೇಕು, ಸುರಕ್ಷಿತ ಪ್ರದೇಶದಲ್ಲಿ ಮಾತ್ರ ಪಟಾಕಿ ಸಂಗ್ರಹಕ್ಕೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ದೊರೆತಿದೆ.

ದೀಪಾವಳಿ ಹಬ್ಬಕ್ಕೆ ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿದ್ದು,ಸಗಟು ದರದಲ್ಲಿ ಪಟಾಕಿ ಮಾರಾಟ ಬಗ್ಗೆ ಜಿಲ್ಲಾಡಳಿತ ಈ ಬಾರಿ ವಿಶೇಷ ನಿಗಾವಹಿಸಿದ್ದು. ಕಳೆದ ವರ್ಷ ಆನೇಕಲ್‌ನಲ್ಲಿ ಅಕ್ರಮ ಪಟಾಕಿ ಗೋದಾಮಿನಿಂದ ಅನಾಹುತ ಸಂಭವಿಸಿ 14 ಜನ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ,ಈ ಬಾರಿ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದ ಜಿಲ್ಲಾಡಳಿತ ಕಮಾಹಿತಿ ನೀಡಿದೆ.

ಜಿಲ್ಲಾಡಳಿತ ರೂಪಿಸಿರುವ ನಿಯಮಗಳ 

Exit mobile version