Site icon PowerTV

ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ, 5 ಕೋಟಿ ಬೇಡಿಕೆ; ತರಕಾರಿ ಮಾರುವ ಯುವಕನ ಬಂಧನ

ದೆಹಲಿ : ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಬೆದರಿಕೆಗಳು ಹೆಚ್ಚಾಗಿದ್ದು. ಲಾರೆನ್ಸ್ ಬಿಷ್ಣೋಯ ಗ್ಯಾಂಗ್ ನಂತರ ಇದೀಗ ತರಕಾರಿ ಮಾರುವ ಯುವಕನೊಬ್ಬ 5 ಕೋಟಿ ನೀಡದಿದ್ದರೆ ಸಲ್ಮಾನ್​ ಖಾನ್​ರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಜಾರ್ಖಂಡ್‌ನ ಜೆಮ್‌ಶೆಡ್‌ಪುರ ಮೂಲದ ತರಕಾರಿ ಮಾರಾಟಗಾರ ಶೇಖ್ ಹುಸೇನ್ ಮೌಸಿನ್ ಎಂದು ಗುರುತಿಸಲಾಗಿದೆ.

ನಗರ ಸಂಚಾರ ನಿಯಂತ್ರಣ ಕೊಠಡಿಯ ವಾಟ್ಸ್ ಆ್ಯಪ್ ಸಹಾಯವಾಣಿಗೆ ಕಳೆದ ವಾರ ₹5 ಕೋಟಿ ಬೇಡಿಕೆಯ ಬೆದರಿಕೆ ಸಂದೇಶ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅನೇಕ ತಂಡಗಳಾಗಿ ವಿವಿಧ ರಾಜ್ಯಗಳಲ್ಲೂ ಶೋಧ ಕಾರ್ಯಾಚರಣೆ ನಡೆಸಿದ್ದರು. ಸಂಚಾರ ಪೊಲೀಸರ ವಾಟ್ಸ್ಆ್ಯಪ್ ಸಹಾಯವಾಣಿಗೆ ಸೋಮವಾರ ಕ್ಷಮೆಯಾಚನೆಯ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಕಳುಹಿಸಿದ್ದ ಮೊಬೈಲ್ ಫೋನ್ ಸಂಖ್ಯೆಯಿಂದಲೇ ಕ್ಷಮೆಯಾಚನೆಯ ಸಂದೇಶ ಬಂದಿದೆ ಎಂದು ಪೊಲೀಸರು ತಿಳಿಸಿದ್ದರು.

Exit mobile version