Site icon PowerTV

ಕಿತ್ತೂರು ಉತ್ಸವದಲ್ಲಿ ಪರೋಕ್ಷವಾಗಿ ಕಿತ್ತಾಡಿಕೊಂಡ ನಾಯಕರು: ಗುಲಾಮಿತನದಿಂದ ಹೊರಬನ್ನಿ ಎಂದ ಕಾಗೇರಿ

ಬೆಳಗಾವಿ : ಕಿತ್ತೂರು ಉತ್ಸವದಲ್ಲಿ ಬಿಜೆಪಿ ಕಾಂಗ್ರೆಸ್ ನಾಯಕರ ಮಧ್ಯೆ ಟಾಕವಾರ್​ ಆಗಿದ್ದು. ಬೆಳಗಾವಿ ಜಿಲ್ಲೆ ಕಿತ್ತೂರು ಕೋಟೆ ಆವರಣದಲ್ಲಿ ನಡೆದ 200 ನೇ ಕಿತ್ತೂರು ವಿಜಯೋತ್ಸವ ಉದ್ಘಾಟನೆ  ಸಮಾರಂಭದಲ್ಲಿ ಟಾಕವಾರ್ ನಡೆದಿದೆ. ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ್ ಮಧ್ಯೆ ಏಟು ಎದುರೇಟು ನಡೆದಿದೆ.

200 ನೇ ಕಿತ್ತೂರು ವಿಜಯೋತ್ಸವ ಉದ್ಘಾಟನೆಯಲ್ಲಿ ಮಾತನಾಡಿದ ವಿಶ್ವೇಶ್ವರ್ ಹೆಗಡೆ ಕಾಗೇರಿ ಜನರು ಗುಲಾಮಗಿರಿಯ ಮಾನಸಿಕತೆಯಿಂದ ಹೊರ ಬರಬೇಕಿದೆ. ದೇಶಕ್ಕೆ ಗುಲಾಮಿತನದ ಮಾನಸಿಕತೆ ಅಂಟಿಕೊಂಡಿದೆ
ಆ ಗುಲಾಮಿತನದ ಆಡಳಿತ ವ್ಯವಸ್ಥೆ, ಮಾನಸಿಕತೆ ಬೆಳೆಸುವ ಸ್ಥಿತಿಯನ್ನ ನಾವು ಕಾಣುತ್ತಿದ್ದೇವೆ. ಎಂದು ಪರೋಕ್ಷವಾಗಿ ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.

ಇವರ ಮಾತಿನ ನಂತರ ಮಾತನಾಡಿದ ಶಾಸಕ ಬಾಬಾಸಾಹೇಬ್ ಪಾಟೀಲ್  ಕಾಗೇರಿಗೆ ತಿರುಗೇಟು ಕೊಟ್ಟರು. ಉತ್ತರ ಕರ್ನಾಟಕ ಸೀಮೆಯ ಜನರ ಬಗ್ಗೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಗೆ ಗಂಡುಮೆಟ್ಟಿದ ನಾಡು ಅಂತಾರೆ. ಅದಕ್ಕೆ ಕಾರಣ ಈ ಕಿತ್ತೂರು ನಾಡು. ಇಲ್ಲಿನ ಜನರು ಯಾವತ್ತು ಗುಲಾಮರಿಗಿ ಬಗ್ಗಿ ನಡೆದಂತಹ ಜನರಲ್ಲಾ.ಅದನ್ನ ಸ್ವಾತಂತ್ರ್ಯ ಪೂರ್ವದಲ್ಲೇ ಸಾಬೀತು ಪಡೆಸಿದ್ದೇವೆ. ನಮ್ಮ ರಕ್ತದಲ್ಲಿಯು ಬಗ್ಗುವಂತಹ ಗುಣವಿಲ್ಲ.200 ವರ್ಷಗಳ ಹಿಂದೆ ಇದ್ದ ‌ಕಿಚ್ಚು ಈಗಲೂ ನಮ್ಮಲ್ಲಿದೆ ಆದರೆ ಒಂದಿಷ್ಟು ಜನರ ಜಿನ್ಸ್ ಚೇಂಜ್ ಆಗಿವೆ ಎಂದು ಹೇಳೋ ಮೂಲಕ ಕಾಗೇರಿಗೆ ಟಾಂಗ್ ಕೊಟ್ಟರು.

Exit mobile version