Site icon PowerTV

ದರ್ಶನ್​ ಬೆನ್ನು ನೋವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದ ವೈದ್ಯರು

ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಜೈಲು ಪಾಲಾಗಿರುವ ದರ್ಶನ್​ಗೆ ಬೆನ್ನು ನೋವು ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು. ಜೈಲಿನ ವೈದ್ಯರ ಸಲಹೆಯ ಮೇರೆಗೆ ಮೊನ್ನೆ (ಅ.22) ರಂದು ಪೋಲಿಸರು ದರ್ಶನ್​ಗೆ ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ MRI ಸ್ಕಾನಿಂಗ್ ಮಾಡಿಸಿದ್ದರು.

ಸ್ಕ್ಯಾನಿಂಗ್ ರಿಪೋರ್ಟ್​ ಜೈಲಾಧಿಕಾರಿಗಳ ಕೈ ಸೇರಿದ್ದು. ವರದಿಯಲ್ಲಿ ದಾಸನಿಗೆ ಆರೋಗ್ಯ ಸಮಸ್ಯೆ ಇದೆ ಎಂಬುದು ಸಾಭೀತಾಗಿದೆ. MRI ಸ್ಕ್ಯಾನ್ ಸಂದರ್ಭದಲ್ಲಿ L5 S1ನಲ್ಲಿ ಸಮಸ್ಯೆ ಇರುವುದು ಕಂಡು ಬಂದಿದ್ದು. ನಿನ್ನೆ ರಾತ್ರಿಯೇ ವೈದ್ಯರು ಜೈಲಿಗೆ ಬಂದು L5, S1 ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದು. ನಿರ್ಲಕ್ಷ್ಯ ಮಾಡದೇ ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸುವ ಬಗ್ಗೆ  ವೈದ್ಯರು ಸಲಹೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ.

ವೈದ್ಯರ ವರದಿಯನ್ನು ಆಧರಿಸಿ ಜೈಲು ಅಧಿಕಾರಿಗಳು ದರ್ಶನ್ ಕುಟುಂಬದವರೊಂದಿಗೆ ಚರ್ಚೆ ನಡೆಸುತ್ತಿದ್ದು. ದರ್ಶನ್ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ನಿರ್ಧರಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ. ಹೀಗಾಗಿ ನಾಳೆ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬರುವ ಸಾಧ್ಯತೆ ಇದ್ದು. ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಾಹಿತಿ ದೊರೆತಿದೆ. ಸದ್ಯ ಬಳ್ಳಾರಿ ಜೈಲು ಅಧಿಕಾರಿಗಳಿಗೆ ಆರೋಪಿ ದರ್ಶನ್ ಬೆನ್ನು ನೋವು ತಲೆ ನೋವಾಗಿ ಪರಿಗಣಿಸಿದೆ.

Exit mobile version