Site icon PowerTV

ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಸೂಚನೆ: ರಾಜ್ಯ ಸರ್ಕಾರದಿಂದ ಆದೇಶ

ಬೆಂಗಳೂರು : ಕನ್ನಡ ರಾಜ್ಯೋತ್ಸವಕ್ಕೆ ದಿನಗಣನೆ ಶುರುವಾಗಿದ್ದು. ಈ ಬಾರಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಿಸಲು ಸರ್ಕಾರ ಎಲ್ಲಾ ಶಾಲಾ ಕಾಲೇಜುಗಳಿಗೆ ಸೂಚನೆ ನೀಡಿದೆ. ನವೆಂಬರ್ 01ಕ್ಕೆ ಕರ್ನಾಟಕ ರಾಜ್ಯ ಉದಯವಾಗಿ 70  ವರ್ಷವಾಗುವುದರಿಂದ ಈ ಬಾರಿ ವಿಜೃಂಬಣೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ.

ಕರ್ನಾಟಕ ರಾಜ್ಯ ಉದಯವಾಗಿ 70 ವರ್ಷಗಳ ಸಂಭ್ರಮ ನಿಮಿತ್ತ ಎಲ್ಲಾ ಸರ್ಕಾರಿ ,ಅನುದಾನ ಸಹಿತ, ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ 69ನೇ ಕನ್ನಡ ರಾಜೋತ್ಸವ ಆಚರಿಸಲು ಸುತ್ತೋಲೆ ಹೊರಡಿಸಿದ್ದು. ಮಕ್ಕಳಿಗೆ ಕನ್ನಡ ನಾಡಿನ ಇತಿಹಾಸ ಸಂಸ್ಕೃತಿ ಪರಂಪರೆಯ ಬಗ್ಗೆ ತಿಳಯುವ ನಿಟ್ಟಿನಲ್ಲಿ
ಕಡ್ಡಾಯವಾಗಿ ಕನ್ನಡ ರಾಜೋತ್ಸವ ಆಚರಿಸಲು ಸೂಚನೆ ನೀಡಲಾಗಿದೆ. ಹಾಗೇಯೆ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ  ಆಯೋಜಿಸಲು  ಶಾಲಾ ಶಿಕ್ಷಣ ಆಯುಕ್ತರು ಸೂಚಿಸಿದ್ದಾರೆ.

Exit mobile version