Site icon PowerTV

ಗೃಹಲಕ್ಷೀ ಹಣ ಕೊಡದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿದ ಗಂಡ

ದಾವಣಗೆರ : ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷೀ ಯೋಜನೆಯಿಂದ ಅನೇಕ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ಆದರೆ ಗೃಹಲಕ್ಷೀ ಹಣ ಕೊಡದಿದ್ದಕ್ಕೆ ಹೆಂಡತಿಯನ್ನೇ ಕೊಲೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಉಜ್ಜಪ್ಪರ ವಡೇರಹಳ್ಳಿಯಲ್ಲಿ ಘಟನೆ ನಡೆದಿದೆ.

ಸತ್ಯಮ್ಮ ( 40) ಕೊಲೆಯಾದ ಮಹಿಳೆಯಾಗಿದ್ದು ತನ್ನ ಗಂಡನಿಂದಲೇ ಕೊಲೆಯಾಗಿದ್ದಾರೆ. ಪಾಪಿ ಪತಿ ಅಣ್ಣಪ್ಪ ಕೊಲೆ ಮಾಡಿದ ಆರೋಪದ ಮೇಲೆ ಪೋಲಿಸರು ಬಂಧಿಸಿದ್ದಾರೆ. ಕುಡಿತದ ಚಟ ಇದ್ದ ಅಣ್ಣಪ್ಪ ಹಣಕ್ಕಾಗಿ ಪತ್ನಿಯನ್ನು ಪೀಡಿಸುತ್ತಿದ್ದ ಎಂದು ಕುಟುಂಬಸ್ಥರ ಗಂಭೀರ ಆರೋಪ ಮಾಡಿದ್ದಾರೆ.

ಪ್ರತಿ ತಿಂಗಳು ಗೃಹಲಕ್ಷ್ಮೀ ಹಣ ಬರುವುದನ್ನು ಕಾದು ಪೋನ್ ಪೇ ಗೂಗಲ್ ಪೇ ಮೂಲಕ ತಾನೇ ಹಣ  ಬಳಸಿ ಕೊಳ್ಳುತ್ತಿದ್ದನು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇದರಿಂದ ಬೇಸತ್ತ ಹೆಂಡತಿ ಬ್ಯಾಂಕ್‌ನಲ್ಲಿ ತಮ್ಮ ಮೊಬೈಲ್  ನಂಬರ್ ಚೇಂಜ್ ಮಾಡಿದ್ದರು ಇದರಿಂದ ಕುಪಿತಗೊಂಡು ಪತಿ ಪ್ರತಿದಿನವು ಜಗಳ‌ ಮಾಡುತ್ತಿದ್ದ ಎಂದು ಮಾಹಿತಿ ದೊರೆತಿದೆ.

ಆದರೆ ನಿನ್ನೆ ಗೃಹಲಕ್ಷ್ಮಿ ಹಣವನ್ನು ಬಿಡಿಸಿಕೊಂಡು ಬರಲು ಬ್ಯಾಂಕಿಗೆ ಹೋಗಿದ್ದ ಸತ್ಯಮ್ಮನನ್ನು ಹಿಂಬಾಲಿಸಿದ್ದ ಪಾಪಿ ಪತಿ ಬ್ಯಾಂಕ್​ನಲ್ಲಿ ಹಣ ಕೊಡು ಎಂದು ಪೀಡಿಸಿದ್ದಾನೆ ಎಂಬ ಮಾಹಿತಿ ದೊರೆತಿದೆ. ಹಣ ಕೊಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್​ನಲ್ಲಿಯೆ ಹಲ್ಲೆ ಮಾಡಿದ್ದ ಪತಿ. ನಂತರ ಮನೆಯಲ್ಲಿ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಹಣ ಕೊಡದಿದ್ದಕ್ಕೆ ಕೊಲೆ ಮಾಡಿದ್ದ ಪತಿ ಕೊಲೆಯನ್ನು ಮುಚ್ಚಿಹಾಕಲು ಕರೆಂಟ್ ಶಾಕ್ ಹೊಡೆದು ಪತ್ನಿ ಸಾವನಪ್ಪಿದ್ದಾಳೆ ಎಂದು ಕತೆ ಕಟ್ಟಿದ್ದನು ಎಂಬ ಮಾಹಿತಿ ದೊರೆತಿದೆ. ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದ್ದು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ  ಅಣ್ಣಪ್ಪ ಹಾಗೂ ಆತನ ಕುಟುಂಬಸ್ಥರು ತಲೆ ತಪ್ಪಿಸಿಕೊಂಡಿದ್ದಾರೆ ಎಂಬ ಮಾಹಿತಿ ದೊರೆತಿದೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಪೋಳಿಸರು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ.

Exit mobile version