Site icon PowerTV

ಮದುವೆ ವಯಸ್ಸಲ್ಲಿ ಸನ್ಯಾಸ ಸ್ವೀಕರಿಸುತ್ತಿರುವ ಯುವತಿಯರು: ಮಾನವ ಕಲ್ಯಾಣಕ್ಕಾಗಿ ಕಠಿಣ ನಿರ್ಧಾರ

ದಾವಣಗೆರೆ :  ಮದುವೆ ವಯಸ್ಸಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾದ ಯುವತಿಯರು. ಕೇಳುವುದಕ್ಕೆ ಆಶ್ಚರ್ಯವಾದರು ಇದು ಸತ್ಯ. ದಾವಣಗೆರೆ ಮತ್ತು ಗೋಕಾಕ್​ನ  ಯುವತಿಯರು ಇಂತಹ ಕಠಿಣ ನಿರ್ಧಾರ ಮಾಡಿದ್ದು ಮುಂದಿನ ತಿಂಗಳು 17ರಂದು ಜಾರ್ಖಂಡ್ ರುಜುಬಾಲಿಕ ಎಂಬಲ್ಲಿ ಸನ್ಯಾಸತ್ವ ಸ್ವೀಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

26 ವರ್ಷದ ಇಬ್ಬರು ಜೈನ್ ಯುವತಿಯರಿಂದ ಸನ್ಯಾಸತ್ವ ಸ್ವೀಕರಿಸಲು ಸಿದ್ಧತೆ ನಡೆದಿದ್ದು. MA ಸೈಕಾಲಜಿ ಮಾಡಿದ ದಾವಣಗೆರೆ ಯುವತಿ ಮಾನಸಿ ಕುಮಾರಿ ಮತ್ತು BA LLB ಮಾಡಿರಿವ ಗೋಕಾಕ್ ನ ಮುಮುಕ್ಷ ಭಕ್ತಿ ಕುಮಾರಿ ಅವರಿಂದ ಸನ್ಯಾಸತ್ವ ಸ್ವೀಕಾಕ್ಕೆ ತೀರ್ಮಾನ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ.

26ನೇ ವಯಸ್ಸಿಗೆ ಲೌಕಿಕ ಜೀವನ ತೊರೆದು ಅಲೌಕಿ ಜೀವನ ಕಡೆ ಮುಖ ಮಾಡಿದ ಯುವತಿಯರನ್ನು ಕಂಡ ಜನ ಅವರಿಗೆ ಅಪಾರ ಗೌರವ ಸೂಚಿಸಿದ್ದು.ಸನ್ಯಾಸತ್ವ ಸ್ವೀಕರಿಸಲು ಮುಂದಾದ ಯುವತಿಯರಿಗೆ ದಾವಣಗೆರೆಯಲ್ಲಿ ಅದ್ಧೂರಿ ಮೆರವಣಿಗೆ ಮಾಡಿದ್ದಾರೆ.ಇಬ್ಬರು ಕುಟುಂಬಸ್ಥರಿಂದ ಔತಣ ಕೂಟ ಏರ್ಪಡಿಸಿದ್ದು ಮಾನವ ಕುಲಕ್ಕೆ ಒಳಿತು ಮಾಡಲು ಸನ್ಯಾಸತ್ವ ಸ್ವೀಕರಿಸಲು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

Exit mobile version