Site icon PowerTV

ದಸರಾ ಮುಗಿದರು ಮುಂದುವರಿದ ಆನೆಗಳ ಕಚ್ಚಾಟ: ಆನೆ ಶಿಬಿರದಲ್ಲಿ ಮೊಂಡಾಟವಾಡಿದ ಧನಂಜಯ

ಮೈಸೂರು: ಆನೆ ಕ್ಯಾಂಪ್​ನಲ್ಲೂ  ದಸರಾ ಆನೆಗಳ ಕಾದಾಟ ಮುಂದುವರೆದಿದ್ದು. ಪರಸ್ಪರ ದಾಳಿ ಮಾಡಿಕೊಂಡು ಆನೆಗಳು ಜಗಳ ಮಾಡಿಕೊಂಡಿವೆ. ದಸರಾ ಸಮಯದಲ್ಲಿಯು ಅರಮನೆ ಆವರಣದಲ್ಲಿ ಕಚ್ಚಾಡಿಕೊಂಡಿದ್ದ ಆನೆಗಳು ಮತ್ತೆ ತಮ್ಮ ಮೊಂಡಾಟ ಮುಂದುವರಿಸಿವೆ.

ಆನೆ ಶಿಬಿರದಲ್ಲಿ ಮತ್ತೆ ಕಿರಿಕ್  ತೆಗೆದಿರುವ ಧನಂಜಯನಿಂದ ಕಂಜನ್ ಮೇಲೆ ದಾಳಿಯಾಗಿದ್ದು.
ಕುಶಾಲನಗರ ತಾಲೂಕಿನ ದುಬಾರೆ ಆನೆ ಶಿಬಿರದಲ್ಲಿ ಧನಂಜಯ ಆನೆಯಿಂದ ದಾಳಿಯಾಗಿದೆ ಎಂದು ಮಾಹಿತಿ ದೊರೆತಿದೆ.

ನಿನ್ನೆ(ಅ.22) ಸಂಜೆ ಕಂಜನ್ ಆನೆಗೆ ಧನಂಜಯ ಆನೆ  ಹಿಂಬದಿಯಿಂದ ದಾಳಿ ಮಾಡಲಾಗಿದ್ದು.ಮೇಲೆ ಮಾವುತ ಕಂಟ್ರೋಲ್ ಮಾಡಿದರು ನಿಲ್ಲದೆ ಧನಂಜಯನ ದಾಳಿ ಮಾಡಿದ್ದಾನೆ. ಕೊನೆಗೆ ಸ್ವಲ್ಪ ಸಮಯದ ನಂತರ ಮಾವುತರು ಮತ್ತು ಕಾವಾಡಿಗಳು ಆನೆಗಳ ಗಲಾಟೆ ಬಿಡಿಸುವಲ್ಲಿ ಸಫಲರಾಗಿದ್ದಾರೆ .

ಮೈಸೂರಿನ ಅರಮನೆಯ ಆವರಣದಲ್ಲಿ ಕಿತ್ತಾಡಿಕೊಂಡಿದ್ದ ಕಂಜನ್, ಧನಂಜಯ. ಅರಮನೆ ಜಯಮಾರ್ತಾಂಡ ದ್ವಾರದ ಮೂಲಕ ಕಂಜನ್ ಆನೆಯನ್ನು ಧನಂಜಯ ಅಟ್ಟಾಡಿಸಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.ಇದೀಗ ಮತ್ತೊಮ್ಮೆ ಕಂಜನ್ ಆನೆ ಮೇಲೆ ಧನಂಜಯನಿಂದ ದಾಳಿಯಾಗಿದೆ. ದಸರದಲ್ಲಿ ನಿಶಾನೆ ಆನೆಯಾಗಿದ್ದ ಧನಂಜಯ. ಕಂಜನ್ ಆನೆ‘ ಸಾಲಾನೆಯಾಗಿ ಕಾರ್ಯನಿರ್ವಹಿಸುತ್ತಿದ್ದವು.

Exit mobile version