Site icon PowerTV

ಗುಂಡ್ಲುಪೇಟೆ ಮೂಲಕ ನಾಮಪತ್ರ ಸಲ್ಲಿಸಲು ವಯನಾಡಿಗೆ ತೆರಳಿದ ಪ್ರಿಯಾಂಕ ಗಾಂಧಿ

ಚಾಮರಾಜನಗರ: ವೈನಾಡು ಉಪಚುನಾವಣೆ ಹಿನ್ನಲೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪ್ರಿಯಾಂಕ ಗಾಂಧಿ ಮತ್ತು ರಾಹುಲ್ ಗಾಂಧಿ ಚಾಮರಾಜನಗರದ ಗುಂಡ್ಲುಪೇಟೆ ಮೂಲಕ  ತೆರಳುತ್ತಿದ್ದು.ಜನರತ್ತ ಕೈ ಬೀಸಿಕೊಂಡು ರಸ್ತೆ ಮೂಲಕ ತೆರಳಿದ್ದಾರೆ.

ಕೇರಳದ ವೈನಾಡು ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಬುಧವಾರದಂದು ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ಹಿನ್ನೆಲೆ ಗಾಂಧಿ ಕುಟುಂಬ ಗುಂಡ್ಲುಪೇಟೆ ಮೂಲಕ ತೆರಳಿದರು.ಮೈಸೂರಿಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವೈನಾಡಿಗೆ ಮಂಗಳವಾರ ಸಂಜೆ ತೆರಳಿದರು.

ಇನ್ನು, ಕಾಂಗ್ರೆಸ್ ವರಿಷ್ಠರು ತೆರಳುತ್ತಿರುವ ಮಾಹಿತಿ ಅರಿತ ಕಾಂಗ್ರೆಸ್ ಕಾರ್ಯಕರ್ತರು ಗುಂಡ್ಲುಪೇಟೆಯ ರಾಷ್ಟ್ರೀಯ ಹೆದ್ದಾರಿ ಎರಡು ಬದಿ ಜಮಾಯಿಸಿದ್ದರು. ಜನರನ್ನು ಕಂಡ ಸೋನಿಯಾ ಗಾಂಧಿ ಕಾರೊಳಗೇ ಕೈ ಬೀಸುತ್ತಾ ತೆರಳಿದರು.

Exit mobile version