Site icon PowerTV

KSRTC ಬಸ್​ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ರಾಮನಗರ: ಮಹಿಳೆಯೊಬ್ಬಳು ಕೆಎಸ್​ಆರ್​ಟಿಸಿ ಬಸ್​ನಲ್ಲಿಯೆ ಮಕ್ಕಳಿಗೆ ಜನ್ಮ ನೀಡಿದ ಘಟನೆ ರಾಮನಗರದಲ್ಲಿ ನಡೆದಿದೆ. ನೆನ್ನೆ (ಅ.21) ಘಟನೆಯಾಗಿದ್ದು. ತಾಯಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

KSRTC ಬಸ್ ನಲ್ಲಿ ಪ್ರಯಾಣಿಸುತ್ತಿದ್ದ 7ತಿಂಗಳ ಗರ್ಭಿಣಿ ಮಹಿಳೆಗೆ ಬಸ್ಸಿನಲ್ಲೇ ಹೆರಿಗೆಯಾಗಿದ್ದು. ಕನಕಪುರ ತಾಲೂಕಿನ ಹುಣಸನಹಳ್ಳಿ ಗ್ರಾಮದ ರಜಿಯಾ ಭಾನು ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ. ನಿನ್ನೆ ಸಂಜೆ ಕನಕಪುರದಿಂದ ಹುಣಸನಹಳ್ಳಿಗೆ ತೆರಳುವಾಗ ಮಾರ್ಗಮಧ್ಯೆ ಹೊಟ್ಟೆನೋವು ಕಾಣಿಸಿಕೊಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಬಳಿಕ ಮಹಿಳೆಯನ್ನು ಬಸ್ ನಲ್ಲೇ ಸರ್ಕಾರಿ ಆಸ್ಪತ್ರೆಗೆ ಚಾಲಕ, ನಿರ್ವಾಹಕ ಕರೆತಂದಿದ್ದು.ಮಕ್ಕಳು ಹಾಗೂ ತಾಯಿಯನ್ನ ಪರೀಕ್ಷಿಸಿದ ವೈದ್ಯರು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ರವಾನೆ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ ಎಂಬ ಮಾಹಿತಿ ದೊರೆತಿದೆ.

Exit mobile version