Site icon PowerTV

ಕೆರೆಯಲ್ಲಿ ನಾಪತ್ತೆಯಾದ ಅಣ್ಣ-ತಂಗಿ: ಮುಂದುವರಿದ ಶೋಧಕಾರ್ಯ

ಬೆಂಗಳೂರು: ನೀರು ತರುಲು ಹೋಗಿದ್ದ ಅಣ್ಣ ತಂಗಿ ಕೆರೆಯಲ್ಲಿ ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಕೆಂಗೇರಿ ಬಳಿಯಲ್ಲಿರುವ ಕೆಂಗೇರು ಕೆರೆಯಲ್ಲಿ ನಡೆದಿದೆ ಎಂದು ಶಂಕಿಸಲಾಗಿದೆ. ಮಕ್ಕಳ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು. ಕೆರೆಯ ತಟದಲ್ಲಿಯೆ ಕುಳಿತು ತನ್ನ ಮಕಳ್ಳ ರಕ್ಷಣೆಗೆ ಅಂಗಲಾಚುತ್ತಿದ್ದಾರೆ.

ನೆನ್ನೆ (ಅ.22) ಸಂಜೆ ಕೆರೆಗೆ ನೀರು ತರಲು ಹೋಗಿದ್ದ ಅಣ್ಣ ತಂಗಿ ನೀರು ಪಾಲಾಗಿರುವ ಶಂಕೆ ವ್ಯಕ್ತ ಪಡಿಸಲಾಗಿದ್ದು. ನೀರು ತರಲು ಹೋಗಿದ್ದಾಗ ಆಟವಾಡ್ತಿದ್ದ ವೇಳೆ ನೀರಿಗೆ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಅಣ್ಣ ಶ್ರೀನಿವಾಸ್ (13) ತಂಗಿ ಲಕ್ಷ್ಮೀ (11) ನಾಪತ್ತೆಯಾಗಿದ್ದು. ಸ್ಥಳಕ್ಕೆ ಪೋಲಿಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಬೇಟಿ ನೀಡಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ನೀರಿನೊಳಗೆ ಕಾರ್ಯಚರಣೆ ನಡೆಸಿ ಶೋದಕಾರ್ಯ ನಡೆಸುತ್ತಿದ್ದು. ಮಕ್ಕಳ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

 

Exit mobile version