Site icon PowerTV

ನಾಳೆ ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ ಜಿಲ್ಲಾಡಳಿತ

ಬೆಂಗಳೂರು : ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಜನರು ತತ್ತರಿಸಿದ್ದು. ನಗರದ ಶಾಲೆಗಳಿಗೆ ಮತ್ತೆ ರಜೆ ಘೋಷಣೆ ಮಾಡಲಾಗಿದೆ. ನೆನ್ನೆ(ಅ.21) ಶಾಲಾ ಕಾಲೇಜುಗಳಿಗೆ ರಜೆ ನೀಡಿದ ಜಿಲ್ಲಾಡಳಿತ. ಇಂದು ಬೆಳಿಗ್ಗೆ ವಾತವರಣ ತಿಳಿಗೊಂಡಿದ್ದನ್ನು ಕಂಡು ಶಾಲೆಗಳನ್ನುಆರಂಭಿಸಿತ್ತು.

ಆದರೆ ಇಂದು ಸಹ ನಗರದಲ್ಲಿ ಬಿಟ್ಟು ಬಿಡದಂತೆ ಮಳೆಸುರಿದ ಹಿನ್ನಲೆಯಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ ನಾಳೆ (ಅ.23) ನಗರದ ಎಲ್ಲಾ ಪ್ರಾಥಮಿಕ, ಪ್ರೌಡ ಶಾಲೆಗಳಗೆ ರಜೆ ಘೋಷಣೆ ಮಾಡಿದ್ದಾರೆ. ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರವಲ್ಲ, ಎಲ್ಲಾ ಖಾಸಗಿ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿದೆ.

ಆದರೆ ಕಾಲೇಜು ವಿಧ್ಯಾರ್ಥಿಗಳಿಗೆ ಯಾವುದೇ ರಜೆ ಘೋಷಣೆ ಮಾಡಿಲ್ಲ ಎಂದು ಮಾಹಿತಿ ತಿಳಿದುಬಂದಿದ್ದು. ನಾಳೆ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದ್ದಾರೆ.

Exit mobile version