Site icon PowerTV

ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಗಳ ಬಂಧನ: ಬಂಧಿತರಿಂದ ಆಧಾರ್​ಕಾರ್ಡ್ ವಶ

ಹಾಸನ : ನಕಲಿ ಆಧಾರ್  ಕಾರ್ಡ್ ಬಳಸಿ ಹಾಸನದಲ್ಲಿ ನೆಲೆಸಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಹಾಸನ ನಗರ ಪೋಲಿಸರು ಬಂಧಿಸಿದ್ದು. ಈ ಮೂವರು ಕಟ್ಟಡ ಕೆಲಸ ಮಾಡಿಕೊಂಡು ನಗರದಲ್ಲಿ ವಾಸಿಸುತ್ತಿದ್ದರು ಎಂದು ಮಾಹಿತಿ ದೊರೆತಿದೆ.

ಹಾಸನ ನಗರದ 80 ಅಡಿ ರಸ್ತೆಯ, ಗದ್ದೆಹಳ್ಳದ, ನಾಲ್ಕನೇ ಅಡ್ಡ ರಸ್ತೆಯ ಜುಬೇರ್ ಎಂಬುವವರ ಮನೆಯಲ್ಲಿ ವಾಸವಿದ್ದ ಮೂವರು ಪೋಲಿಸರು ಬಂಧಿಸಿದ್ದು. ಜಮಾಲ್ ಅಲಿ, ಫಾರೂಕ್ ಅಲಿ, ಅಕ್ಮಲ್ ಹೊಕ್ಕು ಎಂಬುವವರನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತರು ಪಶ್ಚಿಮಬಂಗಾಳದಲ್ಲಿ ನಕಲಿ ಆಧಾರ್ ಕಾರ್ಡ್ ಪಡೆದಿದ್ದ ಎಂಬ ಮಾಹಿತಿ ದೊರೆತಿದೆ.

ಪಶ್ಚಿಮಬಂಗಾಳದ ವಿಳಾಸವಿರುವ ಆಧಾರ್‌ಕಾರ್ಡ್ ಹೊಂದಿರುವ ಮೂವರು ಬಾಂಗ್ಲಾ ಪ್ರಜೆಗಳು ಹಾಸನದಲ್ಲಿ ಮನೆ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.ಮೂವರನ್ನು ವಿಚಾರಣೆ ನಡೆಸುತ್ತಿದ್ದಾರೆ.

ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಕಳೆದ ವಾರವಷ್ಟೆ ಉಡುಪಿಯಲ್ಲಿ ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದರು. ಇವರ ಜೊತೆಗೆ ಪಾಕ್ ಪ್ರಜೆಗಳೂ ಹೆಚ್ಚಾಗುತ್ತಿದ್ದು ಇವರ ಬಂಧನಕ್ಕೂ ಪೋಲಿಸರು ಬಲೆ ಬೀಸಿದ್ದಾರೆ. ಬೆಂಗಳೂರಿನ ಅನೇಕಲ್ ಮತ್ತು ದಾವಣಗೆರೆಯಲ್ಲಿಯು ಪಾಕ್ ಪ್ರಜೆಗಳೂ ಪತ್ತೆಯಾಗಿದ್ದರು.

Exit mobile version