Site icon PowerTV

ಮಧ್ಯಾಹ್ನವೇ ಬೆಂಗಳೂರಿಗೆ ಆಗಮಿಸಿದ ವರುಣ: ತತ್ತರಿಸಿದ ರಾಜಧಾನಿಯ ಜನತೆ

ಬೆಂಗಳೂರು : ನಗರದಲ್ಲಿ 3 ದಿನದಿಂದ ಬಿಟ್ಟು ಬಿಡದಂತೆ ಸುರಿಯುತ್ತಿರುವ ಮಳೆ ಮತ್ತೇ ಮುಂದುವರಿದಿದ್ದು. ರಾತ್ರಿಯೆಲ್ಲಾ ಸುರಿದು ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆ, ಮಧ್ಯಾಹ್ನದ ವೇಳೆಗೆ ಮತ್ತೆ ಮರಳಿದೆ. ಭಾರೀ ಮಳೆಯಿಂದಾಗಿ ವಾಹನ ಸವಾರರು ತೊಂದರೆಗೀಡಾಗಿದ್ದು ಜನರು ಮತ್ತೆ ಮನೆಯಿಂದ ಹೊರಬರಲು ಯೋಚಿಸುವಂತಾಗಿದೆ.

ಬೆಂಗಳೂರಿನ ಮಾಗಡಿ ರಸ್ತೆ, ಭಾಷ್ಯಂ ಸರ್ಕಲ್, ಮೆಜಸ್ಟಿಕ್, ಕೆ.ಆರ್ ಪುರಂ, ಯಶವಂತಪುರ, ಮೇಕ್ರಿ ಸರ್ಕಲ್, ಮಲ್ಲೇಶ್ವರಂ, ಸೇರಿದಂತೆ ನಗರದ ಹಲವಡೆ ಭಾರೀ ಮಳೆಯಾಗುತ್ತಿದ್ದು. ಕೆಂಗೇರಿ ಸುತ್ತಮುತ್ತ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

ಹವಮಾನ ಇಲಾಖೆಯಿಂದ ಬೆಂಗಳೂರಿಗೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದ್ದು. ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂಬ ಮಾಹಿತಿ ದೊರೆತಿದೆ. ಮಳೆಯಿಂದಾಗಿ ರಸ್ತೆಗಳೆಲ್ಲಾ ಜಲಾವೃತವಾಗಿದ್ದು. ವಾಹನ ಸವಾರರು ಹೈರಾಣಾಗಿದ್ದಾರೆ.

Exit mobile version