Site icon PowerTV

ತನ್ನ ಕಾರಿಗಾಗಿ ಇಡೀ ಶೋರೂಮ್​ ಅನ್ನೇ ಧ್ವಂಸಗೊಳಿಸಿದ ಭೂಪ

ರಾಯಚೂರು : ನಮ್ಮ ವಸ್ತುಗಳನ್ನು ರಿಪೇರಿಗೆ ನೀಡಿದಾಗ ಅದನ್ನು ಸರಿಯಾದ ರೀತಿಯಲ್ಲಿ ರಿಪೇರಿ ಮಾಡಿ ಅದನ್ನು ನಮಗೆ ವಾಪಾಸು ನೀಡುತ್ತಾರೆ ಎಂಬ ನಂಬಿಕೆಯಿಂದ ನಮ್ಮ ವಸ್ತುಗಳನ್ನು ನುರಿತರಿಗೆ ನೀಡುತ್ತೇವೆ. ಆದರೆ ಕೆಲವು ಭಾರಿ ನಮ್ಮ ವಸ್ತುಗಳು ಹಾನಿಗೀಡಾದರೆ ಅದಕ್ಕೆ ಪರಿಹಾರವನ್ನು ಪಡೆಯುತ್ತೇವೆ. ಆದರೆ ಇಲ್ಲೊಬ್ಬ ಭೂಪ ತನ್ನ ಕಾರನ್ನು ಸರಿಯಾಗಿ ರಿಪೇರಿ ಮಾಡಿಲ್ಲ ಎಂದು ಕಾರ್​ ಶೋ ರೂಮ್​ನ್ನೆ ಜಖಂಗೊಳಿಸಿರು ಘಟನ ರಾಯಚೂರಿನಲ್ಲಿ ನಡೆದಿದೆ.

ವೀರೇಶ ಎಂಬಾತ ತನ್ನ ವೆನೊಯೋ ಕಾರಿನಲ್ಲಿ ಡಿಪಿಎಫ್ ರೀ ಜನರೇಷನ್‌ ಸಮಸ್ಯೆ ಕಂಡು ಬಂದಿದೆ ಎಂದು ತನ್ನ ಕಾರನ್ನುರಾಯಚೂರು ಜಿಲ್ಲೆಯ ಸಿಂಧನೂರು ನಗರದಲ್ಲಿ ಹ್ಯೂಂಡೈ ಶೋ ರೂಮ್​ಗೆ ಬಿಟ್ಟಿದ್ದನು. ಆದರೆ ಕಾರನ್ನು ಸರಿಯಾಗಿ ರಿಪೇರಿ  ಮಾಡಿಲ್ಲ ಎಂದು ಆರೋಪಿಸಿ ಜಗಳ ತೆಗೆದಿದ್ದಾನೆ. ಇದೇ ವಿಚಾರಕ್ಕೆ ಮೆಕಾನಿಕ್ ಜೊತೆ ಗಲಾಟೆ ಮಾಡಿಕೊಂಡು ದಾಳಿ ಮಾಡಿದ್ದಾರೆ.

ವೀರೇಶ (34) ಮತ್ತು ಸ್ನೇಹಿತರು ಸೇರಿ ಶೋ ರೂಮ್ ಮೇಲೆ ದಾಳಿ ಮಾಡಿದ್ದು. ಶೋರೂಮ್​ನಲ್ಲಿ ರಿಪೇರಿಗೆ ಬಂದಿರುವ 8 ಕಾರುಗಳ ಗ್ಲಾಸುಗಳನ್ನು ಹೊಡೆದು ಹಾಕಲಾಗಿದೆ. ಅಲ್ಲದೇ ಶೋರೂಮ್ ನ‌ ಕ್ಯಾಬಿನ್ ಮತ್ತು ಕಂಪ್ಯೂಟರ್ ಗಳನ್ನು ಜಖಂಗೊಳಿಸಿದ್ದಾರೆ. ಕೃತ್ಯ ಸಂಬಂಧ ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Exit mobile version