Site icon PowerTV

ಕಲುಷಿತ ನೀರು ಸೇವನೆ: ನವಜಾತ ಶಿಶು ಸೇರಿ 5ಜನರ ಸಾವು

ದಾವಣಗೆರೆ:  ಕಲುಶಿತ ನೀರು ಸೇವಿಸಿ ನವಜಾತ ಶಿಶ ಸೇರಿ 5 ಜನ ಪ್ರಾಣ ಕಳೆದುಕೊಂಡಿರುವ ಘಟನೆ ಹರಪನಹಳ್ಲಿ ತಾಲ್ಲೂಕಿನ, ಟಿ.ತುಂಬಿಗೇರೆ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಇಡೀ ಗ್ರಾಮಕ್ಕೆ ದಿಕ್ಕು ತೋಚದಂತಾಗಿದೆ ಎಂಬ ಮಾಹಿತಿ ದೊರೆತಿದೆ.

ಗ್ರಾಮದಲ್ಲಿ ಕಲುಶಿತ ನೀರು ಸೇವನೆಯಿಂದ ಐವತ್ತಕ್ಕೂ ಹೆಚ್ಚು ಜನರಿಗೆ ವಾಂತಿ ಭೇದಿಯಾಗಿದೆ ಎಂಬ ಮಾಹಿತಿ ದೊರೆತಿದೆ. ನಲ್ಲಿಯಲ್ಲಿ ಬರುತ್ತಿರುವ ಕಲುಷಿತ ನೀರು ಸೇವಿಸಿ ವಾಂತಿ ಭೇದಿಯಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದು. ಕಳೆದ ಒಂದೇ ವಾರದಲ್ಲಿ 5ಜನ ಮೃತ ಪಟ್ಟಿದ್ದಾರೆ ಎಂಬ ಮಾಹಿತಿ ದೊರೆತಿದೆ.

 

ಗ್ರಾಮದಲ್ಲಿ ಕಲುಶಿತ ನೀರು ಸೇವಿಸಿ ನವ ಜಾತ ಶಿಶು ಸೇರಿ ಐವರು ಸಾವನಪ್ಪಿದ್ದು. ವಾಂತಿ ಭೇದಿಯಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಗ್ರಾಮದಲ್ಲಿ ಸರಣಿ ಸಾವಾಗುತ್ತಿದ್ದು. ಒಂದೇ ದಿನ ಇಬ್ಬರು ಸಾವನ್ನಪ್ಪಿದ್ದಾರೆ. ಕಳೆದ ವಾರ ಮೂವರ ಮರಣ ಹೊಂದಿದ್ದರು ಎಂಬ ಮಾಹಿತಿ ದೊರೆತಿದೆ. ಸುರೇಶ್(30), ಮಹಾಂತೇಶ್(45)
ಗೌರಮ್ಮ(60), ಹನುಮಂತಪ್ಪ(38), ಮೃತರೆಂದು ಗುರಿತಿಸಲಾಗಿದ್ದು.  8 ತಿಂಗಳ ಗಂಡು ಮಗು ಸಹ ಸಾವನ್ನಪ್ಪಿದ ಎಂದು ಮಾಹಿತಿ ದೊರೆತಿದೆ.

ಗ್ರಾಮದಲ್ಲಿ ಇಷ್ಟೆಲ್ಲಾ ಆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಅನ್ನುತಿಲ್ಲ ಎಂದು  ಗ್ರಾಮಸ್ಥರು ಹಿಡಿಶಾಪ ಹಾಕ್ತಿದ್ದಾರೆ. ಆದರೂ ಸಹ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.

 

 

Exit mobile version