Site icon PowerTV

ಕ್ಷುಲ್ಲಕ ವಿಚಾರಕ್ಕೆ ತಾಳ್ಮೆ ಕಳೆದುಕೊಳ್ಳುತ್ತಿರುವ ರಾಜಧಾನಿಯ ಜನ

ಬೆಂಗಳೂರು : ನಗರದಲ್ಲಿ ದಿನೆ ದಿನೆ ರೋಡ್ ರೇಜ್ ಪ್ರಕರಣಗಳು ಹೆಚ್ಚಾಗುತ್ತಿದ್ದು.ಸಿಲ್ಲಿ ವಿಚಾರಕ್ಕೆ ಬೈಕ್ ಸವಾರ ಹಾಗೂ ಆಟೋ ಚಾಲಕನ ನಡುವೆ ಗಲಾಟೆಯಾದ ಘಟನೆ ಮೈಸೂರು ರಸ್ತೆಯ ಗಾಳಿ ಆಂಜನೇಯ ದೇಗುಲದ ಬಳಿ ನಿನ್ನೆ ರಾತ್ರಿ 10 ಗಂಟೆಗೆ ನಡೆದಿದೆ.

ಬೈಕ್ ಅಡ್ಡ ಬಂತು ಎಂದು ನಡು ರಸ್ತೆಯಲ್ಲಿ ಆಟೋ ಚಾಲಕನ ಗಲಾಟೆ ಮಾಡಿದ್ದು.ಪರಸ್ಪರ ವಾಗ್ವದ ನಡೆದಿದೆ ಆಟೋ ಚಾಲಕನಿಂದ ಬೈಕ್ ಸವಾರನಿಗೆ  ನಿಂದನೆ ಮಾಡಿದ್ದು ನಡು ರಸ್ತೆಯಲ್ಲಿ ಹೈಡ್ರಾಮಾ ನಡೆದಿದೆ ಇಬ್ಬರ ನಡುವೆ ವಾಗ್ವದವಾಗಿ ಆಟೋ ಚಾಲಕನಿಂದ ಬೈಕ್ ಸವಾರನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಮಾಡಲಾಗಿದೆ.

ಹಲ್ಲೆಗೆ ಒಲಗಾದ ಬೈಕ್ ಸವಾರ ಪೋಲಿಸರಿಗೆ ಫೋನ್ ಮಾಡಿ ನೇರವಾಗಿ ಆಟೋ ಒಳಗೆ ಹೋಗಿ ಕುಳಿತುಕೊಂಡಿದ್ದಾನೆ ಇದರಿಂದ ಕೆರಳಿದ ಆಟೋ ಚಾಲಕ ಬೈಕ್ ಚಾಲಕನನ್ನು ಕೆಳಗೆ ಎಳೆದು ಹಾಕಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಲಾಟೆಯ ವಿಡಿಯೋ ಮೊಬೈಲ್ ನಲ್ಲಿ ಚಿತ್ರೀಕರಿಸಲಾಗಿದ್ದು. ಬೈಕ್ ಚಾಲಕ ಎಕ್ಸ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ ಮತ್ತು ಪೋಲಿಸರಿಗೆ ಟ್ಯಾಗ್ ಮಾಡಿ ಆಟೋ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾನೆ.

Exit mobile version