Site icon PowerTV

ನಿರಂತರ ಮಳೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಈರುಳ್ಳಿ ನಾಶ : ಕಂಗಾಲಾದ ರೈತರು

ರಾಯಚೂರು: ರಾಜ್ಯದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ರೈತರು ಸಹ ಹೊರತಾಗಿಲ್ಲ. ಸಮಯಕ್ಕೆ ಸರಿಯಾಗಿ ಮಳೆಯಾಗಿ ಉತ್ತಮ ಬೆಳೆಯ ನಿರೀಕ್ಷೆಯ್ಲಲಿದ್ದ ರೈತರಿಗೆ ಮಳೆರಾಯ ರೈತರ ನಿರೀಕ್ಷಗೆ ತಣ್ಣೀರು ಎರಚಿದ್ದಾನೆ.

ರಾಯಚೂರು ತಾಲ್ಲೂಕಿನಲ್ಲಿ ಈರುಳ್ಳಿ ಬೆಳೆದ ರೈತನಿಗೆ ಸಂಕಷ್ಟ ಎದುರಾಗಿದ್ದು. ಮೋಡಕವಿದ ವಾತವರಣ ಜಿಟಿಜಿಟಿ ಮಳೆಯಿಂದ ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿದೆ. ಲಕ್ಷಾಂತರ ರೂಪಾಯಿ ಈರುಳ್ಳಿ ನಾಶವಾಗಿ ರೈತರು ಕಂಗಲಾಗಿದ್ದು.‘ತಾಲ್ಲೂಕಿನ ಚಂದ್ರಬಂಡ, ಆತ್ಕೂರು, ಕಡಗಂದೊಡ್ಡಿ ಸೇರಿ ಹಲವು ಗ್ರಾಮದಲ್ಲಿ ಬೆಳೆ ನಾಶವಾಗಿದೆ.

ಈರುಳ್ಳಿಗೆ  ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯಿದೆ, ಆದ್ರೆ ಮಳೆಯಿಂದ ಈರುಳ್ಳಿ ಕೊಳೆಯುತ್ತಿದೆ. ಎಂದು ರೈತರು ತಮ್ಮ ದುಖಃವನ್ನು ಹೊರಹಾಕುತ್ತಿದ್ದಾರೆ. ಜಿಟಿ ಜಿಟಿ ಮಳೆಗೆ ಅಪಾರ ಪ್ರಮಾಣದ ಈರುಳ್ಳಿ ಹಾಳಾಗಿದ್ದು ಹಲವು ಭಾಗದಲ್ಲಿ ರಾಶಿ ಮಾಡಲು ಕಿತ್ತುಹಾಕಿದ್ದ ಈರುಳ್ಳಿ ಬೆಳೆಯುಮೋಡ ಕವಿದ ವಾತವರಣ ಮತ್ತು ಮಳೆಯಿಂದ ಕೊಳೆಯುತ್ತಿದೆ ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದೇ ರೈತರು ಪರದಾಟ ನಡೆಸುತ್ತಿದ್ದಾರೆ.

Exit mobile version