Site icon PowerTV

ರಾಜಧಾನಿಗೆ 2 ದಿನ ಯೆಲ್ಲೊ ಅಲರ್ಟ್​ : ಭಾರೀ ಮಳೆಗೆ ಸಜ್ಜಾಗಿ ಎಂದ ಬಿಬಿಎಂಪಿ

ಬೆಂಗಳೂರು : ಕಳೆದ ಒಂದು ವಾರದಿಂದ ಬಿಟ್ಟು ಬಿಡದಂತೆ ಸುರಿಯುತ್ತಿದ್ದ ಮಳೆ ಒಂದೆರಡು ದಿನಗಳ ಕಾಲ ಬಿಡುವು ನೀಡಿ ಮತ್ತೆ ಶುರುವಾಗಿದೆ ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಬೆಂಗಳೂರಿನ ಜನರು ಕಂಗಾಲಾಗಿದ್ದು. ಇನ್ನು ಹೆಚ್ಚಿನ ಮಳೆ ಬರಲಿದೆ ಎಂದು ಹವಮಾನ ಇಲಾಖೆ ಸ್ಪೋಟಕ ಮಾಹಿತಿ ನೀಡಿದೆ.

ಮಾದ್ಯಮದೊಂದಿಗೆ ಮಾಹಿತಿ ಹಂಚಿಕೊಂಡ ಬಿಬಿಎಂಪಿ ಕಮೀಷನರ್ ತುಷಾರ್ ಗಿರಿನಾಥ್, ಬೆಂಗಳೂರಲ್ಲಿ ಅ.23,24 ರವರೆಗೂ ಎಲ್ಲೋ ಅಲರ್ಟ್ ಜಾರಿಯಾಗಿದೆ ಎಂಬ ಮಾಹಿತಿ ನೀಡಿದರು. ಜೊತೆಗೆ ಕಳೆ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆಯ ಪ್ರಮಾಣವನ್ನು ಹಂಚಿಕೊಂಡಿದ್ದಾರೆ.

 ಆರ್ ಆರ್ ನಗರ ಹಾಗೂ ಬೊಮ್ಮನಹಳ್ಳಿಯಲ್ಲಿ 45 ಎಂಎಂ ಹಾಗೂ 48 ಎಂ ಎಂ ಮಳೆ ಬಂದಿದ್ದು.ಆರ್ ಆರ್ ನಗರ,ಬೊಮ್ಮನಹಳ್ಳಿ ಹಾಗೂ ಯಶವಂತಪುರದಲ್ಲಿ ಮಳೆ ಜಾಸ್ತಿಯಾಗಿದೆ. ನಗರದಲ್ಲಿ 97 ಕಡೆ ನೀರು ರಸ್ತೆ ಮೇಲೆ ಹರಿದಿದೆ ಮತ್ತು ಯಲೇಚೇನಹಳ್ಳಿಯ ಮೂರು ಹಾಗೂ ಯಶವಂತಪುರದ 18 ಮನೆಗಳಿಗೆ ನೀರು ನುಗ್ಗಿದೆ,
ನಾಗದೇವನಹಳ್ಳಿಯ ಎಂಟು ಮನೆಗಳು ಸೇರಿ ಒಟ್ಟು ‌30 ಮನೆಗಳಿಗೆ ನೀರಿನಿಂದ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.

ಭಾರೀ ಮಳೆಯಿಂದಾಗಿ ನಗರದಲ್ಲಿ 7ಮರಗಳು ಮತ್ತು 13 ಮರದ ಕೊಂಬೆಗಳು ನೆಲಕ್ಕೆ ಉರುಳಿವೆ
ಆರ್ ಆರ್ ನಗರದಲ್ಲಿ ಕೇವಲ ಒಂದು ಗಂಟೆಯಲ್ಲಿ57 mm ನಷ್ಟು ಮಳೆಯಾಗಿದೆ ಎಂದು ಮಾಹಿತಿ ನೀಡಿದರು.ಇವತ್ತು ಎಲ್ಲಾ ವಲಯಗಳ ಅಧಿಕಾರಿಗಳ ಜೊತೆ ಮೀಟಿಂಗ್ ಮಾಡಿದ್ದೇನೆ.ಅದರ ರಿರ್ಪೋಟ್ ಪ್ರಕಾರ ಈಸ್ಟ್,ವೆಸ್ಟ್ ,ಸೌಥ್ ನಲ್ಲಿ ಮಳೆ ಹೆಚ್ಚಾಗಿ ಬಿದ್ದಿರುವ ರಿಪೋರ್ಟ್ ಬಂದಿದೆ‌. ಎಂದು ಮಾಹಿತಿ ನೀಡಿದರು.

Exit mobile version