Site icon PowerTV

ಪಾಕ್ ಯುವತಿಯೊಂದಿಗೆ ವಿವಾಹವಾದ ಬಿಜೆಪಿ ಮುಖಂಡನ ಪುತ್ರ

ದೆಹಲಿ: ಭಾರತ ಮತ್ತು ಪಾಕಿಸ್ತಾನ್ ನಡುವೆ ಮತ್ತೊಂದು ಆನ್​ಲೈನ್ ವಿವಾಹವಾಗಿದ್ದು. ಉತ್ತರ ಪ್ರದೇಶದ ಬಿಜೆಪಿ ಕಾರ್ಪೊರೇಟರ್ ಒಬ್ಬರ ಪುತ್ರನೇ ಈ ಕೃತ್ಯ ಮಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಉತ್ತರ ಪ್ರದೇಶದ ಜೌನ್​ಪುರ ಜಿಲ್ಲೆಯಲ್ಲಿ ವಿವಾಹ ನಡೆದಿದ್ದು.ಬಿಜೆಪಿ ಕಾರ್ಪೊರೇಟರ್ ತಹಸೀನ್ ಶಾಹಿದ್ ಅವರ ಹಿರಿಯ ಮಗ ಮೊಹಮ್ಮದ್ ಅಬ್ಬಾಸ್ ಹೈದರ್ ಮತ್ತು ಲಾಹೋರ್ ನಿವಾಸಿ ಆಂಡ್ಲೀಪ್ ಜಹ್ರಾ ಅವರ ವಿವಾಹ ಆನ್​ಲೈನ್​ನಲ್ಲಿ ನೆರವೇರಿದೆ.

ಇತ್ತೀಚಿನ ದಿನಗಳಲ್ಲಿ ಈ ರೀತಿಯ  ಮದುವೆಗಳು ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿದ್ದು, ಇದೀಗ ಈ ಪಟ್ಟಿಗೆ ಮತ್ತೊಂದು ವಿವಾಹ ಸೇರ್ಪಡೆಯಾಗಿದೆ. ಕಳೆದ ಒಂದು ವರ್ಷದ ಹಿಂದೆ ಇದೇ ರೀತಿಯಾಗಿ ಉತ್ತರ ಪ್ರದೇಶದ ಯುವಕ ಮತ್ತು ಪಾಕಿಸ್ತಾನದ ಯುವತಿಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪ್ರೀತಿಯಾಗಿ ಯುವತಿಯು ತನ್ನ ಮಕ್ಕಳ ಜೊತೆ ಭಾರತಕ್ಕೆ ಕಳ್ಳ ಮಾರ್ಗದ ಮೂಲಕ ಬಂದು ವಿವಾಹವಾಗಿದ್ದಳು.

Exit mobile version