Site icon PowerTV

ವರುಣನ ಅಬ್ಬರಕ್ಕೆ ನಲುಗಿದ ರಾಜಧಾನಿ : ಶಾಲೆಗಳಿಗೆ ರಜೆ ಘೋಷಣೆ

ಬೆಂಗಳೂರು :  ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನ ಜೀವನ ಅಸ್ಥವ್ಯಸ್ತವಾಗಿದ್ದು. ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಸುರಿದ ರಾತ್ರಿ ಸುರಿದ ಮಳೆಗೆ ಜನ ಜೀವನ ಅಲ್ಲೋಲ – ಕಲ್ಲೋಲವಾಗಿದೆ. ರಾತ್ರಿಯಿಂದ ಬಿಟ್ಟು ಬಿಡದೆ ಸುರಿಯತ್ತಿರುವ ಮಳೆ ಸಿಲಿಕಾನ್ ಸಿಟಿ ಜನರು ಟ್ರಾಫಿಕ್‌ನಲ್ಲಿ ಹೈರಾಣಾಗಿದ್ದಾರೆ.

ಮುಂಜಾನೆ ಇಂದಲೇ ಬಿಟ್ಟು ಬಿಡದೆ ಮಳೆ ರಾಯ ಅಬ್ಬರಿಸುತ್ತಿದ್ದು. ಯಶವಂತಪುರ,ಮೈಸೂರ್ ಬ್ಯಾಂಕ್, ಹೆಬ್ಬಾಳ, ಮೈಸೂರು ರೋಡ್, ವಿಧಾನಸೌಧ, ಸೇರಿದಂತೆ ನಗರದ ಅನೇಖ ಭಾಗದಲ್ಲಿ ಮಳೆ ಅಬ್ಬರಿಸುತ್ತಿದೆ. ಇನ್ನು  ಸಂಜೆ ವೇಳೆಗೆ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಹಲವೆಡೆ ಗುಡುಗು ಸಹಿತ ಬಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಮಳೆ ಹಿನ್ನಲೆ ಬೆಂಗಳೂರಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ 

ಬೆಂಗಳೂರಿನಲ್ಲಿ ಮಳೆ ಆರ್ಭಟ ಹಿನ್ನೆಲೆ,ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಬೆಂಗಳೂರು ನಗರ  ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ. ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಸರಕಾರಿ, ಅನುದಾನಿತ, ಖಾಸಗಿಯ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಿಕ್ಷಣ ಸಂಸ್ಥೆಗಳಿಗೆ ಇಂದು ಸಾಂದರ್ಭಿಕ ರಜೆ ಘೋಷಣೆ ಮಾಡಿಲಾಗಿದೆ ಎಂದು ತಿಳಿಸಿದ್ದಾರೆ.

Exit mobile version