Site icon PowerTV

ನಕಲಿ ಆಡಿಯೋ ಹರಿಬಿಟ್ಟು ಮಾನಹಾನಿ ಮಾಡಿದ್ದಾರೆ ಎಂದು ದೂರು ಕೊಟ್ಟ ಶಾಸಕ ಶಿವಲಿಂಗೇಗೌಡ

ಬೆಂಗಳೂರು : ಮತದಾರರಿಗೆ ಮತ ಹಾಕಲು ಹಣ ನೀಡುವಂತೆ ಶಾಸಕ ಶಿವಲಿಂಗೇಗೌಡ ಹೇಳಿರುವ ಆಡಿಯೋ ವಿಚಾರ. ಇಂದು ಶಾಸಕರು ಬೆಂಗಳೂರಿನ ವಿಧಾನಸೌದ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅರಸೀಕೆರೆ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡರಿಂದ ದೂರು ನೀಡಿದ್ದು.ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿರುವ ಶಿವಲಿಂಗೇಗೌಡ. ಯಾರೋ ಅಪರಿಚಿತರು ಮಾಧ್ಯಮದಲ್ಲಿ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ
ನಾನು 2024 ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತ ಹಾಕಲು ಹಣವನ್ನು ನೀಡುವಂತೆ ಹೇಳಿದ್ದೇನೆ ಎಂಬ ಸುಳ್ಳು ಆಡಿಯೋ ರಿಲೀಸ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನನ್ನ ಧ್ವನಿಯನ್ನು ನಕಲಿ ಮಾಡಿ ಬಿತ್ತರಿಸಲಾಗಿದೆ. ಇದರಿಂದ ನನ್ನ ಘನತೆಗೆ ಧಕ್ಕೆ ಉಂಟಾಗಿದೆ. ಹೀಗಾಗಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕರಿಂದ ದೂರು ನೀಡಲಾಗಿದ್ದು.
ಈ ಸಂಬಂಧ ಎಫ್ಐಆರ್ ದಾಖಲಿಸಿರುವ ವಿಧಾನಸೌಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Exit mobile version