Site icon PowerTV

ಇಸ್ರೇಲ್ ಪ್ರಧಾನಿ ಹತ್ಯೆಗೆ ಯತ್ನ : ಇರಾನಿನ ಖಮೇನಿಗಳನ್ನು ಉಳಿಸುವುದಿಲ್ಲ ಎಂದು ಗುಡುಗಿದ ಇಸ್ರೇಲ್

ಇಸ್ರೇಲ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡಲು ನಡೆದ ಪ್ರಯತ್ನವು, ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಮೇನಿಯನ್ನು ಹೊಡೆದುರುಳಿಸಲು ನಮಗೆ ಕಾನೂನುಸಮ್ಮತಿ ನೀಡಿದಂತಾಗಿದೆ ಎಂದು ಇಸ್ರೇಲ್ ಗುಪ್ತಚರ ಸಂಸ್ಥೆ ‘ಮೊಸ್ಸಾದ್’ ಹೇಳಿದೆ.

ಇತ್ತೀಚೆಗೆ ಇಸ್ರೇಲ್ ಕರಾವಳಿಯ ಕೆಸರಿಯಾ ನಗರದಲ್ಲಿರುವ ಬೆಂಜಮಿನ್ ನೆತನ್ಯಾಹು ಅವರ ಖಾಸಗಿ ನಿವಾಸದ ಮೇಲೆ ಶನಿವಾರ ಡೋನ್ ದಾಳಿ ನಡೆದಿತ್ತು. ಇಸ್ರೇಲ್‌ನ ಗುಪ್ತಚರ ಮತ್ತು ವಿಶೇಷ ಕಾರ್ಯಾಚರಣೆಗಳ ಸಂಸ್ಥೆ ಮೊಸ್ಸಾದ್ ಈ ಘಟನೆ ಬೆನ್ನಲ್ಲೇ ಪ್ರತಿಕ್ರಿಯಿಸಿ ಈ ರೀತಿಯಾಗಿ ಹೇಳಿವೆ. ‘ಪ್ರಧಾನಿ ಹತ್ಯೆಗೆ ನಡೆದಿರುವ ಯತ್ನವು ಖಮೇನಿಯನ್ನು ಹೊಡೆದು ಹಾಕಲು ಸಂಪೂರ್ಣ ಕಾನೂನುಸಮ್ಮತಿ ನೀಡಿದೆ’ ಎಂದು ಟ್ವಿಟ್ ಮಾಡುವ ಮೂಲಕ ಇರಾನ್‌ಗೆ ಎಚ್ಚರಿಕೆ ನೀಡಿದೆ.

ದಾಳಿ ನಡೆದಿರುವುದನ್ನು ಶನಿವಾರವೇ ಖಚಿತಪಡಿಸಿರುವ ಇಸ್ರೇಲ್ ಸೇನೆ, ‘ದಾಳಿ ಆದ ಹೊತ್ತಲ್ಲಿ ಪ್ರಧಾನಿ ಅಥವಾ ಅವರ ಪತ್ನಿ, ನಿವಾಸದಲ್ಲಿ ಇರಲಿಲ್ಲ. ಹಾಗಾಗಿ ಯಾರೊಬ್ಬರೂ ಗಾಯಗೊಂಡಿಲ್ಲ’ ಎಂದಿದೆ. ತಮ್ಮ ಹತ್ಯೆಗೆ ನಡೆದ ದಾಳಿಗೆ ಪ್ರತಿಕ್ರಿಯಿಸಿರುವ ನೆತನ್ಯಾಹು, ‘ನನ್ನನ್ನು ಹತ್ಯೆಗೈಯಲು ಹಿಬ್ಬುಲ್ಲಾ ಸಂಘಟನೆ ನಡೆಸಿದ ಪ್ರಯತ್ನವು ಘೋರ ತಪ್ಪು’ ಎಂದು ಎಚ್ಚರಿಸಿದ್ದಾರೆ.

Exit mobile version