Site icon PowerTV

ಆಟೋ-ಲಾರಿ ಮಧ್ಯೆ ಅಪಘಾತ : ಇಬ್ಬರ ಭೀಕರ ಸಾವು

ಧಾರವಾಡ : ಲಾರಿ ಮತ್ತು ಆಟೋ ಮಧ್ಯೆ ಭೀಕರ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ
ಧಾರವಾಡ‌ ನಗರದ ಸಂಪಿಗೆ ನಗರದ ಬಳಿ ನಡೆದಿದೆ. ಆಟೋ ಚಾಲಕ ರಮೇಶ ಹಂಚಿನಮನಿ (35), ಮರೆವ್ವ ಹಂಚಿನಮನಿ‌ (55 ) ಮೃತರು ಎಂದು ಗುರುತಿಸಲಾಗಿದೆ.

ಆಟೋದಲ್ಲಿದ್ದ ಮೂವರಿಗೆ ಗಂಭೀರ ಗಾಯವಾಗಿದ್ದು.ರೇಣುಕಾ (25), ಪ್ರಣವ(6), ಮತ್ತು ಪೃಥ್ವಿ(4) ಎಂಬುವವರಿಗೆ  ಗಂಭೀರ ಗಾಯವಾಗಿದೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್  ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತರು ದುರ್ದೈವಿಗಳನ್ನು ಕೆಲಗೇರಿ ಬಡಾವಣೆಯ ನಿವಾಸಿಗಳು ಎಂದು ತಿಳಿಯಲಾಗಿದ್ದು.ರೈಲ್ವೆ ನಿಲ್ದಾಣಕ್ಕೆ ಹೊರಟಿದ್ದಾಗ ಅಪಘಾತವಾಗಿದೆ ಎಂದು ಮಾಹಿತಿ ದೊರೆತಿದೆ.

ರಸ್ತೆಯಲ್ಲಿ ಹೋಗುತ್ತಿರುವಾಗ  ರಸ್ತೆ ಮಧ್ಯ ಮಲಗಿದ್ದ ಬಿಡಾಡಿ ದನವನ್ನು ತಪ್ಪಿಸಲು ಹೋಗಿ
ಅವಘಡ ಸಂಭವಿಸಿದ್ದು.ಎದುರಿಗೆ ಬಂದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಉರುಳಿಬಿದ್ದಿದೆ. ಗೋವಾ ಕಡೆ ಹೊರಟಿದ್ದ ಲಾರಿಯಿಂದ ಅಪಘಾತ ಸಂಭವಿಸಿದೆ. ಧಾರವಾಡ ಸಂಚಾರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಘಟಿಸಿದ್ದು ಪೋಲಿಸರು ಹೆಚ್ಚಿನ ಮಾಹಿತಿ ತನಿಖೆ ನಡೆಸುತ್ತಿದ್ದಾರೆ.

Exit mobile version