Site icon PowerTV

ಲಕ್ಷ್ಮೀ ಹೆಬ್ಬಾಳ್ಕರ್​ಗೆ ಒಂದು ಕೆಜಿ ಬಂಗಾರ ಕೊಡುತ್ತೇನೆ – ಮಾಜಿ ಸಚಿವ ಮುರುಗೇಶ್​​ ನಿರಾಣಿ

ಬೆಂಗಳೂರು : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಟ್ಟರೇ ಲಕ್ಷ್ಮೀ ಹೆಬ್ಬಾಳ್ಕರ್​ ಅವರಿಗೆ ಒಂದು ಕೆಜಿ ಬಂಗಾರ ಕೊಟ್ಟು ಸನ್ಮಾನ ಮಾಡುತ್ತೇನೆ ಎಂದು ಮಾಜಿ ಸಚಿವ ಮುರುಗೇಶ್​ ನಿರಾಣಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಓಪನ್​ ಚಾಲೆಂಜ್​ ಹಾಕಿದ್ದಾರೆ.

ನಗರದಲ್ಲಿಂದು ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆ ಮಾತಾಡಿದ ಅವರು, ನಮ್ಮ ಸರ್ಕಾರ ಇದ್ದಾಗ ಲಕ್ಷ್ಮೀ ಅವರು 2ಎ ಮೀಸಲಾತಿ ಮಾಡಿ ಕೊಟ್ರೆ ಒಂದು ಕೆಜಿ ಕುಂದಾ ತಂದು ಸನ್ಮಾನ ಮಾಡೋದಾಗಿ ಹೇಳಿದ್ದರು. ನಿಮ್ಮ ಕೈಯಲ್ಲಿ ಆಗದಿದ್ರೆ ಮೂರು ತಿಂಗಳ ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 2ಎ ಮೀಸಲಾತಿ ಮಾಡಿಕೊಡ್ತೇವೆ. ಆಗ ನೀವು ಒಂದು ಜತೆ ಬಂಗಾರದ ಬಳೆ ಮಾಡಿಸಿ ಕೊಡಿ ಅಂದಿದ್ರು. ಈಗ ಅವರದ್ದೇ ಸರ್ಕಾರ ಬಂದು ಒಂದೂವರೆ ವರ್ಷ ಆಯ್ತು, ಈಗ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡಲಿ. 2ಎ ಮೀಸಲಾತಿ ಕೊಟ್ಟರೆ ಲಕ್ಷ್ಮಿ ಅವರಿಗೆ ಒಂದು ಕೆಜಿ ಬಂಗಾರ ಕೊಟ್ಟು ಸನ್ಮಾನ ಮಾಡುತ್ತೇನೆ ಎಂದಿದ್ದಾರೆ.

Exit mobile version