Site icon PowerTV

ವ್ಯಕ್ತಿಯೊರ್ವನನ್ನ ಛಿದ್ರ ಛಿದ್ರವಾಗಿ ಕೊಲೆ ಮಾಡಿ ನದಿಗೆ ಎಸೆದ ದುಷ್ಕರ್ಮಿಗಳು

ಶಿವಮೊಗ್ಗ : ವ್ಯಕ್ತಿಯೊರ್ವನನ್ನ ದುಷ್ಕರ್ಮಿಗಳು ಛಿದ್ರ, ಛಿದ್ರವಾಗಿ ಕೊಲೆ ಮಾಡಿ ನದಿಗೆ ಎಸೆದಿರುವ ಘಟನೆ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ನಾಗೀಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೃಷ್ಣಪ್ಪ(33) ಎಂಬುವವರು ಕೊಲೆಯಾದ ದುರ್ದೈವಿ. ಮದ್ಯ ಕುಡಿಸಿ, ಕಂದ್ಲಿ, ಕುಡುಗೋಲು ಮತ್ತು ಪ್ಲಾಸ್ಟಿಕ್‌ ಕೊಪ್ಪೆಗಳನ್ನ ಬಳಸಿ, ಕೃಷ್ಣಪ್ಪನನ್ನು ಕತ್ತರಿಸಿ ಕೊಲೆ ಮಾಡಿ ಬಳಿಕ ಎರಡು ಪ್ಲಾಸ್ಟಿಕ್‌ ಚೀಲಗಳಿಗೆ ಅಂಗಾಂಗಗಳನ್ನ ತುಂಬಿಕೊಂಡು ಬಳಿಕ ಶವ ಚೀಲವನ್ನ ಹಿಡಿದು ಕೊರಟೆಗೆರೆ, ಚಿಕ್ಕರೂರು, ಬಾರಂಗಿ ಮೂಲಕ ಗೋಂದಿ ಬ್ರಿಡ್ಜ್‌ ಬಳಿಯ ನದಿಗೆ ಶವದ ತುಂಡುಗಳನ್ನು ಸುರಿದು ಕಿರಣ್​ & ಆತನ ಸ್ನೇಹಿತರಾದ ಗಣೇಶ್, ಪ್ರತಾಪ್​ ಎಸ್ಕೇಪ್‌ ಆಗಿದ್ದಾರೆ.

ಕಿರಣ್​ ಎಂಬಾತ ಕೃಷ್ಣಪ್ಪನ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದರು. ಈ ಸಂಬಂಧ ಕೃಷ್ಣಪ್ಪ, ಕಿರಣ್​ನನ್ನು ಕರೆದು ಬೈದು ವಾರ್ನಿಂಗ್​ ಸಹ ಮಾಡಿದ್ದರು. ಸಂಶಯದ ಮೇರೆಗೆ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

ಪೊಲೀಸರು ಆರೋಪಿಗಳನ್ನು ಬಂಧಿಸಿ, ಎಫ್​ಐಆರ್​ ದಾಖಲಿಸಿದ್ದಾರೆ.

ಸದ್ಯ ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳೆದ ಮೂರು ದಿನಗಳ ಹಿಂದೆಯೇ ಕೃಷ್ಣಪ್ಪ ಪತ್ನಿ ದೂರು ನೀಡಿದ್ದರು.

Exit mobile version