Site icon PowerTV

ದಲಿತ, ಒಕ್ಕಲಿಗರಿಗೆ ಮುನಿರತ್ನ ಬೈದಿರೋದು ಇನ್ನೂ ಸಾಬೀತಾಗಿಲ್ಲ : ರಮೇಶ್​ ಜಾರಕಿಹೊಳಿ

ಚಿಕ್ಕೋಡಿ : ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ದಲಿತರಿಗೆ, ಒಕ್ಕಲಿಗರಿಗೆ ಬೈದಿರೋದು ಇನ್ನೂ ಸಾಬೀತು ಆಗಿಲ್ಲ ಎಂದು ಗೋಕಾಕ್​ ಕ್ಷೇತ್ರದ ಬಿಜೆಪಿ ಎಂಎಲ್ಎ ರಮೇಶ್​ ಜಾರಕಿಹೊಳಿ ಅವರು ಹೇಳಿದ್ದಾರೆ.

ಅಥಣಿಯಲ್ಲಿಂದು ಎಂಎಲ್​ಎ ಮುನಿರತ್ನ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮದೊಂದಿಗೆ ಮಾತಾಡಿದ ಅವರು, ದಲಿತರಿಗೆ, ಒಕ್ಕಲಿಗರಿಗೆ ಬೈದಿರೋದು ಇನ್ನೂ ಸಾಬೀತು ಆಗಿಲ್ಲ. ಇದನ್ನು ಸಿಡಿ ಶಿವು ಮಾಡಿದ್ದಾನೆ ಅವನ ವಿರೋಧಿಗಳನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತಾನೆ. ನಾನೊಬ್ಬ ಗಟ್ಟಿಯಾಗಿದ್ದೇನೆ ಹೀಗಾಗಿ ಹೊರಗಡೆ ಇದ್ದೇನೆ ಎಂದು ಹೆಸರು ಹೇಳದೆ ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಡಿಕೆಶಿ ಕಂಪನಿ ರಾಜ್ಯದಲ್ಲಿ ನನ್ನ ಮೊದಲು ಬಲಿ ಪಡೆದರು ನಂತರ ದೇವೇಗೌಡ ಕುಟುಂಬ ಬಲಿ ಪಡೆದರು ತದನಂತರ ಮುನಿರತ್ನ ಅವರನ್ನು ಬಲಿ ಪಡೆದುಕೊಂಡ. ಮುಂದೆ ಯಾರೂ ಬರುತ್ತಾರೆ ನೋಡಿ, ಇದನ್ನೆಲ್ಲಾ ನೋಡಿದರೆ ಒಂದು ಫಿಲ್ಮ್ ನೋಡಿದ ರೀತಿ ಆಗುತ್ತದೆ. ಇನ್ನೂ ಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಬರುತ್ತದೆ. ಸಿಡಿ ಬಗ್ಗೆ ಸಿಬಿಐ ತನಿಖೆ ನೀಡಬೇಕು ಎಂದು ಹೇಳಿದರು.

ಅದುವಲ್ಲದೇ ಸಿಡಿ ನಂತರ ದ್ವೇಷದ ರಾಜಕಾರಣದಿಂದ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರಧಾನಿ, ಸಿಬಿಐ ವಹಿಸಬೇಕು ಎಂದು ಪಿಎಂ ಮೋದಿಗೆ ಮಾಧ್ಯಮಗಳ ಮುಖಾಂತರ ಶಾಸಕ ರಮೇಶ್ ಜಾರಕೊಹೊಳಿ ಅವರು ಮನವಿ ಮಾಡಿದರು.

Exit mobile version