Site icon PowerTV

ಹೆಚ್ಡಿಕೆ ಮೆಂಟಲ್​ ಆಗಿದ್ದಾನೆ ಹುಚ್ಚಾಸ್ಪತ್ರೆಗೆ ಸೇರಿಸಿ ಅಂತ ಹೇಳೋಣ : ಡಿಸಿಎಂ ಡಿಕೆಶಿ

ರಾಮನಗರ : ಯಾವ ಬಡವನ ಆಸ್ತಿ ಕಬಳಿಸಿದ್ದೀನಿ ಅಂತ ಕರ್ಕೊಂಡ್ ಬಂದು ನಿಲ್ಲಿಸಿಬಿಡಿ, ಬಡವರಿಗೆ ತೊಂದ್ರೆ ಕೊಟ್ಟಿರೋದು ನನ್ನ ಜಾಯಾಮಾನದಲ್ಲಿ‌ ಇಲ್ಲ ಎಂದು ಡಿ.ಕೆ ಶಿವಕುಮಾರ್ ಅವರು ಹೆಚ್ಡಿಕೆ ಹೇಳಿಕೆ ಪ್ರತಿಕ್ರಿಯೆ ನೀಡಿದ್ದಾರೆ.

ಕುಮಾರಸ್ವಾಮಿ ಮೇಲೆ ಕಣ್ ಹಾಕಿದ್ರೆ ಸರ್ವನಾಶ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನನ್ನ ಮೇಲೆ ಕಣ್ಣಾಕಿದ್ರೂ ಅದೇ ಪ್ರಾಬ್ಲಂ ಅಲ್ವಾ? ಎಂದು ಹೆಚ್ಡಿಕೆ ಮಾತಿಗೆ ಡಿಸಿಎಂ ಡಿಕೆಶಿ ಉಲ್ಟಾ ಟಾಂಗ್ ಕೊಟ್ಟಿದ್ದಾರೆ.

ಇದೇ ವೇಳೆ ಸಿದ್ಧಾರ್ಥ್ ಸಾವಿಗೆ ಡಿಕೆಶಿ ಕಾರಣ ಎಂಬ ಹೆಚ್ಡಿಕೆ ಹೇಳಿಕೆ ಬಗ್ಗೆ ಮಾತಾಡಿದ ಅವರು, ಅಯ್ಯೋ..‌ ಕುಮಾರಸ್ವಾಮಿಗೆ ಹುಚ್ಚಾಸ್ಪತ್ರೆಗೆ ಸೇರಿಸೋಣ. ಅವರ ತಂದೆ ಮೇಲೆ 1985ರಲ್ಲಿ ಅಸೆಂಬ್ಲಿ ಗೆದ್ದಿದ್ದೀನಿ ‌ನಾನು. ಬಂಗಾರಪ್ಪ ಸಂಪುಟದಲ್ಲಿ ಮಂತ್ರಿಯಾಗಿದ್ದೆ ನಾನು. ನನ್ನ ಎಸ್​.ಎಂ ಕೃಷ್ಣ ಸಂಬಂಧ ಏನ್ ಅಂತ ಅವರಿಗೆ ಏನ್ ಗೊತ್ತಿದೆ. ಪಾಪಾ ಮೆಂಟಲ್ ಆಗಿದ್ದಾನೆ ಅಂತ ಕಾಣಿಸುತ್ತೆ! ಹಿತೈಷಿಗಳಿಗೋ ಅಥವಾ ಪಾರ್ಟಿ ಕಾರ್ಯಕರ್ತರಿಗೋ ಅವರನ್ನು ಮೆಂಟಲ್ ಆಸ್ಪತ್ರೆ ಸೇರಿಸಿ ಅಂತ ಹೇಳೋಣ ಎಂದು ಗುಡುಗಿದ್ದಾರೆ.

Exit mobile version