Site icon PowerTV

ರಾಜ್ಯ ಸರ್ಕಾರಕ್ಕೆ ಸಂಪುಟ ಸರ್ಜರಿ; ಸಚಿವ ಜಮೀರ್​ ಅಹ್ಮದ್​ ಮುನ್ಸೂಚನೆ

ಬೆಂಗಳೂರು: ಯಾವ ಕಾರಣಕ್ಕೆ ಸರ್ಕಾರ ಬೀಳುತ್ತಂತೆ(?) ಮೂಡಾ (MUDA) ವಿಚಾರದಲ್ಲಿ ಸಿಎಂ ಪಾತ್ರ ಏನಿದೆ(?) ತಪ್ಪೇನಿದೆ(?) ಪರ್ಯಾಯವಾಗಿ ನಿವೇಶನ ಕೊಟ್ಟಿರೋದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಗಲೂ ಸಿದ್ದರಾಮಯ್ಯಗೆ ಕಪ್ಪು ಚುಕ್ಕಿ ಇಲ್ಲ. ಅವರು ಯಾಕೆ ರಾಜೀನಾಮೆ ಕೊಡ್ತಾರೆ(?) ಎಂದು ವಸತಿ, ವಕ್ಫ್ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಜಮೀರ್​ ಅಹ್ಮದ್​ ಖಾನ್ ಅವರು ವಿಪಕ್ಷಗಳ ಆರೋಪಗಳಿಗೆ ಟಾಂಗ್​ ಕೊಟ್ಟಿದ್ದಾರೆ.

ಅಲ್ಪಸಂಖ್ಯಾತ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರ ಮುಡಾ ಹಗರಣ ಸಂಬಂಧ ಮಾತಾಡಿದ ಅವರು, ಬಿಜೆಪಿಯವರಿಗೆ ಯಾವುದೇ ವಿಷಯಗಳಿಲ್ಲ ಅದಕ್ಕೆ ಇದನ್ನೇ ಇಶ್ಯು ಮಾಡ್ತಿದ್ದಾರೆ. ಹೆಚ್​.ಡಿ. ಕುಮಾರಸ್ವಾಮಿ ಅವರು ಬ್ಯಾಕಪ್​ಗೆ ನಿಂತಿದ್ದಾರೆ. ಹೆಚ್ಡಿಕೆಗೆ, ಸಿದ್ದರಾಮಯ್ಯ ಸಿಎಂ ಆಗಿರುವುದನ್ನು ಸಹಿಸುವುದಕ್ಕೆ ಆಗ್ತಿಲ್ಲ. ಸಿದ್ದರಾಮಯ್ಯನವರೇ ಹೆಚ್ಡಿಕೆಗೆ ಟಾರ್ಗೆಟ್ ಎಂದು ಹೇಳಿದರು.

ಎಷ್ಟು ದಿನ ನಾನು ಸಚಿವನಾಗಿ ಇರ್ತಿನೋ ಗೊತ್ತಿಲ್ಲ, ನಾನು ಜೀವಂತವಾಗಿ ಇರ್ತಿನೋ ಇಲ್ವೋ ಗೊತ್ತಿಲ್ಲ. ಯಾಕಂದ್ರೆ ದೇವರು ಹಣೆ ಬರಹ ಬರೆದಿರುತ್ತಾನೆ. ಮುಂದೆ ನಾನು ಮಂತ್ರಿ ಆಗಿ ಇರ್ತಿನೋ ಇಲ್ವಾ ಗೊತ್ತಿಲ್ಲ. ಈಗ ನನ್ನನ್ನ ಅಲ್ಪಸಂಖ್ಯಾತ ಸಚಿವರಾಗಿ ಮಾಡಿದ್ದಾರೆ. ಮುಂದಿನ ನಾಲ್ಕು ವರ್ಷ ನಮ್ಮ ಸರ್ಕಾರ ಇರುತ್ತದೆ. ನಾನೇ ಅಲ್ಪಸಂಖ್ಯಾತರ ಮಂತ್ರಿ ಆಗಿ ಇರ್ತಿನಿ ಅನ್ನೋ ವಿಶ್ವಾಸ ಇದೆ ಎಂದು ಹೇಳುವ ಮೂಲಕ ಸಚಿವ ಜಮೀರ್​ ಅಹ್ಮದ್​ ಖಾನೆ ಅವರು ಸಂಪುಟ ಸರ್ಜರಿ ಹಾಗೂ ಖಾತೆ ಬದಲಾವಣೆ ವಿಚಾರದ ಗುಟ್ಟು ರಟ್ಟು ಮಾಡಿದ್ದಾರೆ ಎನ್ನಬಹುದು.

Exit mobile version