Site icon PowerTV

ನೀರಿಗಾಗಿ ಹಾಹಾಕಾರ; ಬಿಂದಿಗೆ ಹಿಡಿದು ಬಡಿದಾಡಿಕೊಂಡ ಮಹಿಳೆಯರು

ಕುಡಿಯುವ ನೀರಿಗಾಗಿ ನಾರಿಯರು ಬಿಂದಿಗೆ ಹಿಡಿದು ಜಗಳವಾಡಿರುವ ಘಟನೆ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ದೇವಲು ನಾಯಕ್‌ ತಾಂಡಾದಲ್ಲಿ ನಡೆದಿದೆ.

ರಾಜ್ಯದ ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ.. ಹನಿ ಹನಿ ನೀರಿಗಾಗಿಯು ಜನರು ಪರದಾಡುತ್ತಿದ್ದಾರೆ. ನೀರು ಸಿಕ್ಕಿದ್ರೆ ಸಾಕು. ಬಂದ್ರೆ ಸಾಕ. ಎಂದು ಮಹಿಳೆಯರು ಖಾಲಿ ಕೊಳಾಯಿ ಮುಂದೆ ನಿಂತು ಜಪಮಾಡುತ್ತಿದ್ದಾರೆ. ಇನ್ನು ಇದೇ ಪರಿಸ್ಥಿತಿ ದೇವಲು ನಾಯಕ್‌ ತಾಂಡಾದಲ್ಲಿ ಎದುರಾಗಿದೆ. ಕುಡಿಯೋ ನೀರಿಗೆ ಹಾಹಾಕಾರ ಎದುರಾಗಿದೆ.

ಕೊಳವೆ ಬಾವಿ ಬತ್ತಿಹೋಗಿದ್ದರಿಂದ ತಾಂಡಾದಲ್ಲಿ ನೀರಿನ ಸಮಸ್ಯೆ ಎದುರಾಗಿದೆ.. ಕೆಲಸ ಬಿಟ್ಟು ಗಂಟೆಗಟ್ಟಲೇ ನೀರಿಗಾಗಿ ಕಾದುಕುಳಿತ ತಾಂಡಾ ಗ್ರಾಮಸ್ಥರು ನೀರು ತುಂಬಿಕೊಳ್ಳಲು ಖಾಲಿ ಕೊಡಗಳಿಂದ ನಾರಿಯರ ಬಡಿದಾಡಿಕೊಂಡಿದ್ದಾರೆ. ನೀರು ತುಂಬಿಕೊಳ್ಳುವ ವಿಚಾರಕ್ಕೆ ಮಹಿಳೆಯರು ಮಾತಿಗೆ ಮಾತು ಬೆಳೆದು ಜಗಳವಾಡಿದ್ದಾರೆ. ನೀರಿಗಾಗಿ ನಾ ಮುಂದು ತಾ ಮುಂದು ಎಂದು ಖಾಲಿ ಕೊಡದಿಂದ ಮಹಿಳೆಯರು ಪರಸ್ಪರ ಬಡಿದಾಡಿಕೊಂಡಿದ್ದಾರೆ.

Exit mobile version