Site icon PowerTV

ದರ್ಶನ್​​​ ನೋಡಲು ಹುಬ್ಬಳ್ಳಿಯಿಂದ ಬಂದ ಅಜ್ಜಿ

ನಟ ದರ್ಶನ್​​​ ನೋಡಲು ಹುಬ್ಬಳ್ಳಿಯಿಂದ ಅಜ್ಜಿ ರಾಜೇಶ್ವರಿ ಅವರು ಬಂದಿದ್ದಾರೆ. ತುಂಬಾ ದೂರದಿಂದ ಬಂದಿದ್ದೇನೆ ನನ್ನನ್ನು ಭೇಟಿಯಾಗಲು ಬಿಡಿ ಎಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಎರಡು ಬಾರಿ ದರ್ಶನ್ ಅವರನ್ನು ನಾನು ಭೇಟಿ ಆಗಿದ್ದೇನೆ. ಅವನು ತಪ್ಪು ಮಾಡಿದ್ದಾನೆ ಆದರೆ, ಶಿಕ್ಷೆ ಕೊಡಬೇಡಿ. ಎಲ್ಲರೂ ತಪ್ಪು ಮಾಡುತ್ತಾರೆ ಅವನು ಸಹ ಮಾಡಿದ್ದಾನೆ. ನಾನು ದೂರದಿಂದ ಬಸ್ಸಿನಲ್ಲಿ ಬಂದಿದ್ದೇನೆ ಎಂದು ಗೋಗೆರೆದಿದ್ದಾರೆ.

ಪ್ರತಿನಿತ್ಯ ಜೈಲಿನ ಬಳಿ ಅಭಿಮಾನಿಗಳು ಬರುತ್ತಿರುತ್ತಾರೆ ಆದರೆ, ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಆದ್ರು ಸಹ ಕೆಲ ಅಭಿಮಾನಿಗಳು ಪ್ರತಿನಿತ್ಯ ಜೈಲಿನ ಬಳಿ ಭೇಟಿಗಾಗಿ ಕಾದು ವಾಪಸ್​​​ ಹೋಗುತ್ತಿದ್ದಾರೆ.

Exit mobile version