Site icon PowerTV

ರಾಮ ದೇವರಲ್ಲ ಮನುಷ್ಯ, ದೈವತ್ವದ ಪುರುಷ ಅಷ್ಟೇ : ಮಾಜಿ ಸಂಸದ ಉಗ್ರಪ್ಪ

ವಿಜಯನಗರ : ರಾಮ ದೇವರಲ್ಲ ಮನುಷ್ಯ, ದೈವತ್ವದ ಪುರುಷ ಅಷ್ಟೇ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವಿಜಯನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರೇ ನಿಜವಾದ ರಾಮ ಭಕ್ತರು, ನೀವಲ್ಲ. ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದು ಕಾಂಗ್ರೆಸ್​ನವರೇ, ಬಿಜೆಪಿಯವರು ಟ್ರಸ್ಟ್ ಅನ್ನೇ ಹೈಜಾಕ್ ಮಾಡಿದ್ದಾರೆ ಎಂದು ದೂರಿದ್ದಾರೆ.

ಮುಂಬರುವ ಲೋಕಸಭೆ ಚುನಾವಣೆಯಲ್ಲಿ 400 ಸೀಟು ಗೆದ್ದೇ ಗೆಲ್ಲುತ್ತೇವೆ. ಯಾವ ಪುರುಷಾರ್ಥಕ್ಕೆ ನಿಮಗೆ 400 ಸೀಟು ಕೊಡಬೇಕು. ಚೈನಾ, ಪಾಕಿಸ್ತಾನ, ಮಾಲ್ಡೀವ್ಸ್ ಸೇರಿ ಅಕ್ಕ ಪಕ್ಕದ ದೇಶಗಳು ನಮ್ಮ ವಿರುದ್ಧ ಇದ್ದಾವೆ. ಈ ಬಾರಿ ರಾಮನ ಹೆಸರಲ್ಲಿ ಎಲೆಕ್ಷನ್​ಗೆ ಹೊರಟಿದ್ದಿರಿ, ಕಳೆದ ಬಾರಿ ಪುಲ್ವಾಮಾ ಹೆಸರಲ್ಲಿ ಚುನಾವಣೆ ಮಾಡಿದ್ದಿರಿ ಎಂದು ಟೀಕಿದ್ದಾರೆ.

ನರೇಂದ್ರ ಮೋದಿ ವಚನ ಭ್ರಷ್ಟ

ರಾಮ ಕೊಟ್ಟ ವಚನವನ್ನು ಈಡೇರಿಸಿದನು. ಪ್ರಧಾನಿ ನರೇಂದ್ರ ಮೋದಿ ವಚನ ಭ್ರಷ್ಟ ಇದ್ದಾನೆ. ರಾಮನ ಹೆಸರು ಹೇಳೋದಕ್ಕೆ ನಿಮಗೆ ಯೋಗ್ಯತೆ ಇಲ್ಲ. ರಾಮನ ಹೆಸರು ಹೇಳೋದಕ್ಕೆ ಯೋಗ್ಯರಿರುವರು ಕಾಂಗ್ರೆಸ್​ನವರು ಎಂದು ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.

Exit mobile version