Site icon PowerTV

ಖರ್ಗೆ ಅಧ್ಯಕ್ಷತೆಯಲ್ಲೇ ಕಾಂಗ್ರೆಸ್ ಖತಮ್ ಆಗುತ್ತಿದೆ : ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್

ಕಲಬುರಗಿ : ಕಾಂಗ್ರೆಸ್ ಪಕ್ಷ ಖತಮ್ ಆಗುತ್ತಿದೆ. ಮಹಾತ್ಮ ಗಾಂಧಿ 1947ರಲ್ಲೇ ಹೇಳಿದ್ರು ಕಾಂಗ್ರೆಸ್ ಪಕ್ಷ ಖತಮ್ ಮಾಡಿ ಅಂತ ಎಂದು ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್​ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಮೇಲೆ ಬಿಜೆಪಿ ನಾಯಕರಿಗೆ ಬಹಳ ಪ್ರೀತಿ ಇದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಕಲಬುರಗಿಯಲ್ಲಿ ತಿರುಗೇಟು ನೀಡಿದ್ದಾರೆ. ಬಿಜೆಪಿ ಪಕ್ಷ ಕಲಬುರಗಿ ಜನತೆ ಸೇರಿದಂತೆ ಇಡೀ ದೇಶದ ಜನತೆಯನ್ನು ಪ್ರೀತಿ ಮಾಡುತ್ತದೆ ಎಂದು ಹೇಳಿದ್ದಾರೆ.‌

ಎಐಸಿಸಿ ಅಧ್ಯಕ್ಷರಾಗಿಮಲ್ಲಿಕಾರ್ಜುನ ಖರ್ಗೆ ಸಿಕ್ಕಿಹಾಕಿಕೊಂಡಿದ್ದಾರೆ. ಖರ್ಗೆ ಅವರು ಅಧ್ಯಕ್ಷರಾದ ಮೇಲೆ ಪಕ್ಷದಲ್ಲಿ ಖಡಕ್ ಖಡಕ್ ಶಬ್ಬ ಬರುತ್ತಿದೆ. ಹೀಗಾಗಿ, ಲೀಡರ್​ಗಳು ಪಾರ್ಟಿ ಬಿಟ್ಟು ಓಡಿಹೋಗುತ್ತಿದ್ದಾರೆ. ಕಾಂಗ್ರೆಸ್​ಗೆ ಈ ಬಾರಿ ಎನ್​ಡಿಎ 400ಕ್ಕೂ ಹೆಚ್ಚು ಸೀಟು ಗೆಲ್ಲುವ ಟೆನ್ಷನ್ ಇದೆ. ಇಡೀ ದೇಶದ ಕಾಂಗ್ರೆಸ್ ಲೀಡರ್ಸ್ ಪಕ್ಷ ಬಿಟ್ಟು ಹೋಗ್ತಿದ್ದಾರೆ, ಖರ್ಗೆ ಏನು ಮಾಡಲು ಸಾಧ್ಯ? ಎಂದು ಛೇಡಿಸಿದ್ದಾರೆ.

ಬನಾರಸ್​ನಲ್ಲಿ ಕುಡಿದು, ಕುಪ್ಪಳಿಸ್ತಾರೆ ಅಂತಾರೆ

ಕಾಂಗ್ರೆಸ್​ನವರು ರಾಮಮಂದಿರಕ್ಕೆ ವಿರೋಧ ಮಾಡುತ್ತಾರೆ. ಕಲಂ 370 ತೆಗೆದಿರೋದಕ್ಕೂ ವಿರೋಧ ಮಾಡ್ತಾರೆ. ಬನಾರಸ್​ನಲ್ಲಿ ಕುಡಿದು, ಕುಪ್ಪಳಿಸ್ತಾರೆ ಎಂದು ರಾಹುಲ್ ಗಾಂಧಿ ಹೇಳ್ತಾರೆ. ಏನಾಗಿದೆ ಅವರಿಗೆ ಗೊತ್ತಿಲ್ಲ, ವಿನಾಶ್ ಕಾಲ ವಿಪರೀತ ಬುದ್ದಿ. ಖರ್ಗೆ ಅವರ ಅಧ್ಯಕ್ಷತೆಯಲ್ಲೇ ಕಾಂಗ್ರೆಸ್ ಸಂಪೂರ್ಣ ನಾಶ ಆಗಲಿದೆ. ಬಿಜೆಪಿ 370 ಸೀಟಿಗಿಂತಲೂ ಹೆಚ್ಚು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Exit mobile version