Site icon PowerTV

ನಟ ದರ್ಶನ್ ವಿರುದ್ಧ ದೂರು ದಾಖಲು

ಬೆಂಗಳೂರು : ನಟ ದರ್ಶನ್ ಅವರಿಗೆ ವಿವಾದಗಳು ಹೊಸದೇನಲ್ಲ. ಇದೀಗ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಫಿಲಂ ಚೇಂಬರ್​ನಲ್ಲಿ ದೂರು ದಾಖಲಾಗಿದೆ.

ತಗಡೇ.. ಗುಮ್ಮಸ್ಕೋತಿಯಾ ಎಂಬ ಪದ ಬಳಕೆ ಮೂಲಕ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರಿಗೆ ಧಮ್ಕಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಜಾಪರ ವೇದಿಕೆಯ ಕಾರ್ಯಕರ್ತರು ದೂರು ನೀಡಿದ್ದಾರೆ.

ದರ್ಶನ್ ನಟನೆಯ ಕಾಟೇರ ಹಾಗೂ ರಾಬರ್ಟ್ ಸಿನಿಮಾಗಳ ಕಥೆ, ಟೈಟಲ್ ವಿಚಾರಕ್ಕೆ ದರ್ಶನ್ ಹಾಗೂ ಉಮಾಪತಿ ನಡುವೆ ಟಾಕ್ ವಾರ್ ಏರ್ಪಟ್ಟಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದ ದರ್ಶನ್ ಮಾತಿನ ಭರದಲ್ಲಿ ಅಯ್ಯೋ ತಗಡೇ.. ಯಾಕೆ ಬಂದು ಬಂದು ನಮ್ಮ ಕೈಯಲ್ಲಿ ಗುಮ್ಮಿಸಿಕೊಳ್ಳುತ್ತೀಯಾ? ಎಂದು ನಿರ್ಮಾಪಕ ಉಮಾಪತಿ ಹೆಸರೇಳದೆ ವಾರ್ನ್ ಮಾಡಿದ್ದರು.

Exit mobile version