Site icon PowerTV

ಸೆಟಲ್​ಮೆಂಟ್​​ ಮಾಡುವ ಸಂಸ್ಕ್ರತಿ ನಮ್ಮದಲ್ಲ: ಹೆಚ್​.ಡಿ ಕುಮಾರಸ್ವಾಮಿ

ಬೆಂಗಳೂರು: ಸೆಟಲ್​ಮೆಂಟ್​​ ಮಾಡುವ ಸಂಸ್ಕ್ರತಿ ನಮ್ಮದಲ್ಲ ಎಂದು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸೆಟಲ್​ಮೆಂಟ್​​ ಮಾಡುವ ಸಂಸ್ಕ್ರತಿ ನಮ್ಮದಲ್ಲ. ಸಿಕ್ಕ ಸಿಕ್ಕ ಜಾಗದಲ್ಲಿ ತಂತಿ ಬೇಲಿ ಹಾಕೋರು ಯಾರು..?. ನಾವು ಆತ್ಮಸಾಕ್ಷಿಯಿಂದ ಮತ ಕೇಳ್ತೀವಿ. ನಾವು ಕಾಂಗ್ರೆಸ್‌ ಶಾಸಕರ ಜೊತೆ ಮಾತನಾಡಿದ್ರೆ ಅಪರಾಧ.ಇವರು ಮೊನ್ನೆ ಬಿಜೆಪಿ ಶಾಸಕರನ್ನ ಕೂರಿಸಿಕೊಂಡು ಮಾತನಾಡಿದ್ದು ಅದು ಅಪರಾಧವಲ್ವಾ. ಆಗಾದ್ರೆ ನೀವು ಮಾಡ್ತಿರೋದು ಏನು. ಸೆಟಲ್​ಮೆಂಟ್ ರಾಜಕೀಯ ಮಾಡ್ತಿರೋದು ನೀವು ನಾವಲ್ಲ ಅಂತ ವಾಗ್ದಾಳಿ ನಡೆಸಿದ್ದಾರೆ.

ಕುಪೇಂದ್ರ ರೆಡ್ಡಿಗೆ ಮತ ಹಾಕುವಂತೆ ಪಕ್ಷೇತರ ಶಾಸಕರಿಗೆ ಧಮ್ಕಿ ಆರೋಪಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಇದೀಗ ಹೆಚ್‌ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Exit mobile version