ಸ್ಯಾಂಡಲ್‌ವುಡ್ ನಟಿ ಅದಿತಿ ಪ್ರಭುದೇವ ಮತ್ತು ಪತಿ ಯಶಸ್ ಪಾಟ್ಲಾ ಮೊದಲ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ. ಸರಳವಾಗಿ ಸೀಮಂತ ಶಾಸ್ತ್ರ ನೆರವೇರಿಸಿಕೊಂಡಿರುವ ಜೋಡಿ.ಕಾರ್ಯಕ್ರಮದ ಸುಂದರ ಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ಧಾರೆ.
ಹಾರೈಕೆಗಳ ಸುರಿಮಳೆಯೂ ಅಭಿಮಾನಿ ವಲಯದಿಂದ ಸುರಿದಿತ್ತು. ಸಿನಿಮಾ ವಿಚಾರಕ್ಕೆ ಬಂದರೆ, ಒಂದಷ್ಟು ಸಿನಿಮಾ ರಿಲೀಸ್ ಸಿದ್ಧವಾಗಿದ್ದು, ಮುಂದಿನ ಕೆಲ ತಿಂಗಳ ಕಾಲ ಸಿನಿಮಾದಿಂದ ದೂರವೇ ಉಳಿಯಲಿದ್ದಾರೆ ಅದಿತಿ.