Site icon PowerTV

ಸಿದ್ದರಾಮಯ್ಯ ಅಂದ್ರೆ ಸುಳ್ಳು, ಸುಳ್ಳು ಅಂದ್ರೆ ಸಿದ್ದರಾಮಯ್ಯ : ಆರ್. ಅಶೋಕ್

ಬೆಂಗಳೂರು : ಸಿದ್ದರಾಮಯ್ಯ ಅಂದ್ರೆ ಸುಳ್ಳು.. ಸುಳ್ಳು ಅಂದರೆ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್. ಅಶೋಕ್‌ ಟೀಕಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರ ಭಾಷಣಕ್ಕೆ ಉತ್ತರ‌ ನೀಡಿದ್ದಾರೆ. ಆದರೆ, ಅವರ‌ ಬಳಿ‌ ನಾವು‌ ಕೇಳುವ ಪ್ರಶ್ನೆಗಳಿಗೆ ಉತ್ತರ‌ ಇಲ್ಲ ಎಂದು ಹೇಳಿದರು.

ವಿದ್ಯಾನಿಧಿ,‌ ಕಿಸಾನ್ ಸಮ್ಮಾನ್ ಯಾಕೆ ರದ್ದು‌ ಮಾಡಿದ್ರಿ ಅಂತ‌ ಕೇಳಿದ್ರೆ ಉತ್ತರವಿಲ್ಲ. ಕಳೆದ‌ ಬಾರಿ ನೀರಾವರಿ ಇಲಾಖೆಯಿಂದ 15% ಕಡಿಮೆ ಮಾಡಿದ್ದಾರೆ. ರೈತರಿಗೆ‌ ಎಷ್ಟು ಸಬ್ಸಿಡಿ ಕಡಿಮೆ ಮಾಡಿದ್ದೀರಿ ಅಂದ್ರೆ ಹೇಳಲ್ಲ. ಇದು ಸಿದ್ದು ಎಕನಾಮಿಕ್ ಬಜೆಟ್. ಎಲ್ಲಾ ಸುಳ್ಳು ಎಂದು ಕುಟುಕಿದರು.

ಅಭಿವೃದ್ಧಿ ಬಗ್ಗೆ ಮಾತೇ‌ ಇಲ್ಲ, ಬರೀ ಸಂತೆ‌ ಭಾಷಣ

ಬಸವರಾಜ ಬೊಮ್ಮಾಯಿ‌ ಅವರ ಅವಧಿಯಲ್ಲಿ ಸರ್ಪ್ಲಸ್ ಬಜೆಟ್,‌‌ ಈಗ ಓಪ್ಲಸ್ ಬಜೆಟ್. ಈಗ 90% ಸಾಲ ಮಾಡಿದವರು ಕಾಂಗ್ರೆಸ್​ನವರು. ಒಂದೇ‌ ವರ್ಷದಲ್ಲಿ 1 ಲಕ್ಷ ಕೋಟಿ ಸಾಲ ಮಾಡಿದಾರೆ. ರಾಜ್ಯಪಾಲರ ಭಾಷಣದಲ್ಲಿ ದೂರದೃಷ್ಟಿ ಅಂತ ಹೇಳಬೇಕಿತ್ತು, ‌ಹೇಳಿಲ್ಲ. ಅಭಿವೃದ್ಧಿ ಬಗ್ಗೆ ಮಾತೇ‌ ಇಲ್ಲ, ಬರೀ ಸಂತೆ‌ ಭಾಷಣ. ಇವರ ರಿಪ್ಲೆ ಸಂಪೂರ್ಣ ಸುಳ್ಳು. ಹೀಗಾಗಿ, ನಾವು ವಾಕ್ ಔಟ್ ಮಾಡಿದೀವಿ ಎಂದು ಆರ್. ಅಶೋಕ್ ತಿಳಿಸಿದರು.

Exit mobile version