Site icon PowerTV

ವಿಮಾನ ಅಪಘಾತ: ಕೂದಲೆಳೆ ಅಂತರದಲ್ಲಿ ಧ್ರುವ ಸರ್ಜಾ ಅಂಡ್ ‘ಮಾರ್ಟಿನ್’ ಚಿತ್ರತಂಡ ಬಚಾವ್

ಬೆಂಗಳೂರು: ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ ಸೇರಿದಂತೆ ಮಾರ್ಟಿನ್‌ ಚಿತ್ರ ತಂಡವಿದ್ದ ವಿಮಾನವು ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದೆ. ಸದ್ಯ ಚಿತ್ರ ತಂಡ ಸೇರಿದಂತೆ ವಿಮಾನ ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದಾರೆ.

ಹೌದು,ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಮೇತ ಪೋಸ್ಟ್ ಹಾಕಿಕೊಂಡಿರೋ ನಟ ಧ್ರುವ ಸರ್ಜಾ       ಮಾರ್ಟಿನ್ ಫಿಲ್ಮ್ ಟೀಂ ಪೈಲಟ್ ಚಾಕಚಕ್ಯತೆಯಿಂದ ನಾವೆಲ್ಲಾ ಸೇಫ್​ ಆಗಿದ್ದೇವೆ ಎಂದು ತಿಳಿಸಿದ್ದಾರೆ.

ಅರ್ಜುನ್ ನಿರ್ದೇಶನದ ಧ್ರುವ ಸರ್ಜಾ ನಟನೆಯ ಎಂಪಿ ಚಿತ್ರದ ಶೂಟಿಂಗ್​ ನಿಮಿತ್ತ ಅವರು ನಿನ್ನೆ ದೆಹಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ಫ್ಲೈಟ್​ನಲ್ಲಿ ಈ ಘಟನೆ ನಡೆದಿದೆ.

ಧ್ರುವ ಸರ್ಜಾ ಪೋಸ್ಟ್‌

“ಮೊದಲ ಬಾರಿಗೆ ಸಾವನ್ನು ಎದುರಿಸಿ ಮತ್ತೆ ಜೀವ ಸಿಕ್ಕಂತಾಗಿದೆ. ಇದು ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ದೇವರು ಚಿರು ಅಣ್ಣನ ಅವರ ಸಂಪೂರ್ಣ ಆಶೀರ್ವಾದ ಫಲ. ವಿಮಾನದಲ್ಲಿದ್ದ ಪ್ರತಿ ಪ್ರಯಾಣಿಕರು ತಮ್ಮ ಪ್ರಾಣಕ್ಕಾಗಿ ತಮ್ಮ ದೇವರಿಗೆ ಜೋರಾಗಿ ಪ್ರಾರ್ಥಿಸುವುದನ್ನು ಕೇಳುವುದು ನಿಜಕ್ಕೂ ಉಸಿರು ತೆಗೆದುಕೊಳ್ಳುವ ಅನುಭವವಾಗಿತ್ತು. ಸುರಕ್ಷಿತವಾಗಿ ಬಂದಿಳಿಯುತ್ತಿದ್ದಂತೆ ಪ್ರಯಾಣಿಕರು ಸಂತೋಷದಿಂದ ಕಣ್ಣೀರು ಹಾಕಿದರು. ಪ್ರತಿಯೊಬ್ಬರು ತಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಇದು ಪುನರ್ಜನ್ಮವಾಗಿದೆ. ನಮಗೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕಲು ಅವಕಾಶ ಮತ್ತೆ ಸಿಕ್ಕಿದೆ. ಜೈ ಆಂಜನೇಯ ” ಎಂದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಪೋಸ್ಟ್‌ ಮಾಡಿದ್ದಾರೆ.

ಜೈ ಆಂಜನೇಯ ಎಂದ ಧ್ರುವ ಸರ್ಜಾ

ಅಪಾಯದಿಂದ ಪರದಾ ಧ್ರುವ ಸರ್ಜಾ ವಿಡಿಯೋದಲ್ಲಿ ಮಾತನಾಡಿದ್ದು, ” ನನ್ನ ಜೀವಮಾನದಲ್ಲಿಯೇ ವಿಮಾನದಲ್ಲಿ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್‌ ಗಾಡ್‌, ಜೈ ಆಂಜನೇಯ ” ಎಂದಿದ್ದಾರೆ. ಇನ್ನು ಈ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ ಪಿ ಅರ್ಜುನ್‌, ನಾಯಕ ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್‌ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಇದ್ದಾರೆ. ಪ್ರಾಣಾಪಾಯದಿಂದ ಪಾರಾದ ಖುಷಿಯಲ್ಲಿ ಎಲ್ಲರೂ ಜೈ ಆಂಜನೇಯ ಜೈ ಶ್ರೀರಾಮ್‌ ಎಂದಿದ್ದಾರೆ. ದೇವರ ಆಶೀರ್ವಾದ, ಅಭಿಮಾನಿಗಳ ಹಾರೈಕೆ ಜೀವ ಹಾನಿ ಇಂದ ತಪಿಸಿಕೊಂಡಿದೆ ಎಂದು ಚಿತ್ರ ತಂಡ ಹೇಳಿದೆ.

Exit mobile version