Site icon PowerTV

ದರ್ಶನ್ ಮನೆಯಲ್ಲಿ ‘ಕಾಟೇರ’ ಎಂಬ ಕುದುರೆ ಇತ್ತು : ಅಸಲಿ ಸತ್ಯ ಇಲ್ಲಿದೆ ನೋಡಿ

ಬೆಂಗಳೂರು : ‘ಕಾಟೇರ’ ಟೈಟಲ್ ವಿಚಾರದಲ್ಲಿ ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಡುವೆ ಟಾಕ್ ವಾರ್ ಶುರುವಾಗಿದೆ. ಈ ಬಗ್ಗೆ ನಿರ್ದೇಶಕ ಮಹೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದರ್ಶನ್ ಅವರು ಎಂದಿಗೂ ಯಾವ ವಿಚಾರದ ಬಗ್ಗೆ ಮಾತಾಡಲ್ಲ. ಈಗ ಮಾತಾಡಿದ್ದಾರೆ ಅಂದರೆ ಅವರಿಗೆ ನೋವಾಗಿದೆ ಎಂದು ಹೇಳಿದ್ದಾರೆ.

ದರ್ಶನ್ ಅವರ ಮನೆಯಲ್ಲಿ ‘ಕಾಟೇರ’ ಎಂಬ ಕುದುರೆ ಇತ್ತು. ಅದು ಸತ್ತ ಮೇಲೆ ನೆನಪಿಗೋಸ್ಕರ ಆ ಟೈಟಲ್‌ನ ತುರುಣ್ ಸುಧೀರ್ ಅವರ ಬ್ಯಾನರ್‌ನಲ್ಲಿ ರಿಜಿಸ್ಟರ್ ಮಾಡಿಸುವ ಯೋಜನೆ ಇತ್ತು. ಆದರೆ, ಒಂದೇ ಬ್ಯಾನರ್‌ನಲ್ಲಿ 3 ಹೆಸರನ್ನು ರಿಜಿಸ್ಟರ್ ಮಾಡೋಕೆ ಆಗಲ್ಲ ಎಂದು ಹೇಳಿ, ಉಮಾಪತಿ ಅವರ ಬ್ಯಾನರ್‌ನಲ್ಲಿ ದರ್ಶನ್ ರಿಜಿಸ್ಟರ್ ಮಾಡಿಸಿದ್ದರು ಎಂದು ತಿಳಿಸಿದ್ದಾರೆ.

ಈಗ ಇದರ ಬಗ್ಗೆ ಸ್ಪಷ್ಟನೆ ನೀಡೋಣ ಎಂದು ದರ್ಶನ್ ಅವರು ನಿರ್ಧರಿಸಿದ್ದರು. ಯಾಕೆಂದರೆ, ಕಾಟೇರ ಬಳಿಕ ದರ್ಶನ್ ಅವರು ಪ್ರಕಾಶ್ ನಿರ್ದೇಶನದ ‘ಡೆವಿಲ್ ದಿ ಹಿರೋ’ ಚಿತ್ರದಲ್ಲಿ ಬ್ಯುಸಿಯಾಗಲಿದ್ದಾರೆ. ಈ ವಿಚಾರಕ್ಕೆ ಸ್ಪಷ್ಟನೆ ಇರಲಿ ಎಂದೇ, ನನ್ನ ಹಾಗೂ ತರುಣ್ ಸುಧೀರ್ ಬಗ್ಗೆ ಡಿ ಬಾಸ್ ಸ್ಪಷ್ಟನೆ ಕೊಡಿಸಿದ್ದಾರೆ ಎಂದು ಹೇಳಿದ್ದಾರೆ.

ಡಿ ಬಾಸ್ ಟೈಟಲ್ ಎಕ್ಸ್‌ಚೇಂಜ್ ಮಾಡಿಸಿದ್ರು

‘ಕಾಟೇರ’ ಟೈಟಲ್ ಉಮಾಪತಿ ಅವರ ಬಳಿ ಇತ್ತು. ‘ಮದಗಜ’ ಟೈಟಲ್ ರಾಮಮೂರ್ತಿ ಹತ್ತಿರ ಇತ್ತು. ಇಬ್ಬರೊಂದಿಗೆ ಮಾತನಾಡಿಸಿ ಚಿತ್ರದ ಟೈಟಲ್ ಅನ್ನು ದರ್ಶನ್ ಸರ್ ಎಕ್ಸ್‌ಚೇಂಜ್ ಮಾಡಿಸಿದ್ದರು. ಬೆಂಕಿ ಇಲ್ಲದೇ ಹೊಗೆಯಾಡಲ್ಲ. ಅವತ್ತಿನ ಅವರ ಹೇಳಿಕೆಯಿಂದಲೇ ಇದೆಲ್ಲಾ ಶುರುವಾಗಿದ್ದು. ಡಿ ಬಾಸ್ ಮತ್ತು ಉಮಾಪತಿ ಅವರು ಒಂದಾಗಲಿ, ಅವರ ಸಂಬಂಧ ಸರಿ ಹೋಗಲಿ ಎಂದು ಮಹೇಶ್ ತಿಳಿಸಿದ್ದಾರೆ.

Exit mobile version